ರಾಗ - : ತಾಳ -
ದಿಕ್ಕು ತೋಚದಲ್ಲೊ ಹಯಮುಖ ಎನ್ನ ವಡಲ l
ದುಃಖ ಕೇಳಿ ಸಲಹೊ ಶಿವಸಖಾ ll ಪ ll
ಮರ್ಕಟಗಳ ಚಪಲದಂತೆ ಕಕ್ಕವಿಕ್ಕಿ ಮಾಡಿ ಕುಮಾ l
ರ್ಗಕ್ಕೆ ಎಳದು ತತ್ವ ದೇವರ್ಕಳೆಲ್ಲ ನಗುತಾರೆ ll ಅ ಪ ll
ನಿನ್ನ ಪಾದದಲಿ ಮನವನೂ ನಿಲ್ಲಿಸದಲೆ l
ಹೊನ್ನು ಹೆಣ್ಣಿನಲಿ ರತಿಯನೂ l
ಚನ್ನವಾಗಿ ಕೊಟ್ಟು ಎನಗೆ ಹೆಣ್ಣು ನಾಯಿ ಹಿಂದೆ ಅಲಿವ l
ಕುನ್ನಿಯಂತೆ ಮಾಡಿ ಇಕ್ಕೊ ಬನ್ನ ಬಡಿಸುತೈದಾರೆ ll 1 ll
ಬ್ಯಾಸರಿಕೆ ಎನ್ನೆ ಕೊಡುವರೊ ನಿನ್ನ ಧ್ಯಾನ l
ಲೇಶವಾದರೂನು ನೀಡರೊ l
ದೋಷಿ ಎನಿಸಿ ಎನ್ನ ತಾವು ದೋಷದೂರರಾಗಿ ಸಂ l
ತೋಷ ಬಡುತಲಿಹರು ನಾ ದ್ವೇಷಿ ಏನೊ ಇವರಿಗೆಲ್ಲಾ ll 2 ll
ನಾಯಾರಿಗಿನ್ನು ಸೇರಲೈ ಸಕಲ ತತ್ವ l
ನಾಯಕರಿಗೆ ನಾಥ ನೀನೆಲೈ l
ವಾಯುವಿನುತ ಶ್ರೀಶ ಬಾದರಾಯಣವಿಟ್ಠಲ ನೀನೆ l
ಕಾಯಬೇಕೊ ಕರುಣಿ ನಿನಗೆ ಬಾಯಿಬಿಟ್ಟು ಬೇಡಿಕೊಂಬೆ ll 3 ll
***
No comments:
Post a Comment