Monday, 1 November 2021

ಕೋಪಿಸದಿರು ಸ್ವಾಮಿ ಶ್ರೀ ನರಸಿಂಹ ankita venkata

 ತುಪಾಕಿ ವೆಂಕಟರಮಣಾಚಾರ್ಯ

ಕೋಪಿಸದಿರು ಸ್ವಾಮಿ ಶ್ರೀ ನರಸಿಂಹ ಪ.


ಕೋಪಿಸದಿರು ಕರುಣಾಪಯೋನಿಧಿಯೆ ಮ-

ಹಾಪರಾಧಗಳನು ಲೇಪಗೊಳಿಸದಿರು ಅ.ಪ.


ಮಧ್ವ ವಲ್ಲಭ ನಿನ್ನ ಸೇವೆಯ ನಡಸುವ

ಮಧ್ಯ ಮಧ್ಯದೊಳೆದ್ದು ಹೋದ ತಪ್ಪು

ಶುದ್ಧಿಯಿಲ್ಲದ ತಪ್ಪು ಸೂಕ್ತಿ ಪಾಠಗಳೊಳಾ-

ಬದ್ಧ ಬರುವ ತಪ್ಪೆನಿದ್ದರು ಕ್ಷಮಿಸಿನ್ನು 1


ಸಂಸಾರ ಲಂಪಟನಾಗಿ ಬಳಲುವೆನು

ಕಂಸಾರಿ ನಿನಗಿನ್ನು ಪೇಳ್ವದೇನು

ಹಂಸವಾಹನ ಪೀಠ ಹಲಧರನನುಜನೆ

ಸಂಶಯಿಸದೆ ಎನ್ನ ಕಾಯೊ ಕಮಲನಾಭ 2


ಪತಿತಜನರಿಗಧಿಪತಿಯಾಗಿರುವೆ ನಾನು

ಮತಿಹೀನನೆಂಬುದ ಬಲ್ಲಿ ನೀನು

ಪಾದ ಪದ್ಮವೆ ಇನ್ನು

ಗತಿ ಎಂದು ನಂಬಿದನ ಮೇಲೆ ಮುನಿಸಿನ್ನೇನು 3


ಪಾತಕ ಕಡಲೊಳು ಪೊರಳುತ ನೆರಳುತ

ಯಾತರಿಂದಲು ಏಳಲಾರದಿನ್ನು

ಶ್ರೀ ತರುಣಿಯವರ ನಿನ್ನ ಸೇರಿದ ಜಗ

ನ್ನಾಥ ದಾಸರ ಪಾದದವಲಂಬಗೊಂಡೆನು 4


ಶ್ರೀಶ ಶೇಷಗಿರೀಂದ್ರ ವಾಸ ನಿನ್ನನೆ ನಂಬಿ

ದಾಸ ಕೂಟದಿ ಸೇರಿಕೊಂಡಿಹೆನು

ಣಾ ಸಮುದ್ರನೆ ಎನ್ನ ಕಾವದುಚಿತವಿನ್ನು 5

***


No comments:

Post a Comment