Saturday 1 May 2021

ಕಾಶಿಯ ಪುರದಲ್ಲಿ ಬಿಂದುಮಾಧವನಾಗಿ ರಾಮ ರಾಮ ankita swaroopa vittala


ಕಾಶಿಲಿ ನಡೆದ ಪುರಂದರ

ಉತ್ಸವ ನೋಡಿರೆ ರಾಮ ರಾಮ ||ಪ|| 


ಉತ್ಸವಕೆ ಬಂದ ಭಕ್ತರ ಶಿಸ್ತನು

ನೋಡಿರೆ ರಾಮ ರಾಮ ||ಅ. ಪ|| 


ಮಹಿಷನ ಊರಿನ ಬ್ರಾಹ್ಮಣ ಕರೆಯಲು ರಾಮ ರಾಮ

ಮನುಜರ ದಂಡೆಲ್ಲಾ ಕಾಶಿಗೆ ಹೊರಟಿತ್ತು ರಾಮ ರಾಮ ||1|| 


ಕಾಶಿಯ ಪುರದಲ್ಲಿ ಬಿಂದುಮಾಧವನಾಗಿ ರಾಮ ರಾಮ

ಪ್ರಯಾಗದಲ್ಲಿ ವೇಣಿ ಮಾಧವನಾಗಿ ರಾಮ ರಾಮ ||2|| 


ಗಂಗೆಯ ಜೊತೆ ಗಂಗಾಧರನಿದ್ದಾನೆ ರಾಮ ರಾಮ

ಪಾರ್ವತಿ ದೇವಿಯು ಅನ್ನಪೂರ್ಣೇಯಾಗಿ ನಿಂತವಳೆ ರಾಮ ರಾಮ ||3|| 


ವಿಶ್ವೇಶ ವಿಶಾಲಾಕ್ಷಿ ಆಶೀರ್ವಾದದಿಂದ ರಾಮ ರಾಮ

ಎಲ್ಲಾ ಪೀಠಾಧೀಷರ ದರ್ಶನವಾಯಿತು ರಾಮ ರಾಮ||4|| 


ಭಾಗವತ ಜನರ ಭಾಗವತದ ಸುರಿಮಳೆ ರಾಮ ರಾಮ

ಭಕ್ತರ ಮನಸಿಗೆ ಹರುಷವ ತಂದಿತು ರಾಮ ರಾಮ ||5|| 


ಲಕ್ಷ ಲಕ್ಷ ಜನರ ಭೋಜನವಾಯಿತು ರಾಮ ರಾಮ

ಅಚ್ಯುತನ ದಯೆದಿಂದ ಕಾಶಿ ಯಾತ್ರೆ ಆಯಿತು ರಾಮ ರಾಮ ||6|| 


ಹರುಷದಲಿ ಗಂಗಾ ನದಿಯಲ್ಲಿ ಮಿಂದೆವು ರಾಮ ರಾಮ

ಹದಿನಾರು ಕ್ಷೇತ್ರದ ದರ್ಶನದ ಪುಣ್ಯವು ರಾಮ ರಾಮ ||7|| 


ವೈಕುಂಠ ಗಿರಿಯ ವೆಂಕರೇಶನ ದಯವು ರಾಮ ರಾಮ

ರಾತ್ರಿ ಹಿಡಿದ ಚಳಿಯು ಒಡನೆ ಓಡಿತು ರಾಮ ರಾಮ ||8|| 


ಕಾಶಿ ರಾಜನ ಅರಮನೆಯು ನೋಡಿದೆವು ರಾಮ ರಾಮ

ಕಾಲಭೈರವನ ದಿವ್ಯ ರೂಪವ ನೋಡಿರೋ ರಾಮ ರಾಮ ||9|| 


ಕವಡೆಮ್ಮ ನಮ್ಮನ್ನು ಕರುಣದಿ ಹರಸಿದಳು ರಾಮ ರಾಮ

ಬೆಟ್ಟದ ಹನುಮ ಬಲವಂತ ಕಾಯ್ದನು ರಾಮ ರಾಮ ||10|| 


ಮಧ್ವಾಪುರಂದತ್ರೋತ್ಸವದಿ ಸತ್ಯಾತ್ಮತೀರ್ಥರು ರಾಮ ರಾಮ

ಸತ್ಯದ ನುಡಿಗಳನು ಸ್ಫೂರ್ತಿಯಲಿ ಬಿತ್ತಿದರು ರಾಮ ರಾಮ ||11|| 


ಕಟ್ಟ ಕಡೆಯ ದಿನ ಕಟ್ಟಿಕೊಂಡೆವು ಪುಣ್ಯ ರಾಮ ರಾಮ

ಗಂಗಾ ಜನಕ "ಸ್ವರೂಪವಿಠಲ" ಹರಸಿದನು ರಾಮ ರಾಮ ||12|| 


ಮೇದಿನಿಯೋಳು ಬಲು ಮೋದಕ ಉತ್ಸವ ರಾಮ ರಾಮ

ಪಾದಭಜಕಾರಿಗೆಲ್ಲ ಸುಲಭದಿ ಒಲಿವ ನಮ್ಮ ರಾಮ ರಾಮ ||13||

****


 ಕಾಶಿಯಲ್ಲಿ ನಡೆದ ಮಧ್ವಾಪುರಂದತ್ರೋತ್ಸವದಲ್ಲಿ ಬರೆದ ಹಾಡು

ರೂಪಾ. ಎಂ. ಜೋಷಿ, written on 21.01.2023

ಹುನಗುಂದ

***



No comments:

Post a Comment