ಸತ್ಯಸಂತುಷ್ಟ ದುಗ್ದಾಬ್ದೇ: ಜಾತ: ಸತ್ಯಪರಾಯಣ: |
ಚಿಂತಾಮಣಿ: ಸದಾ ಭೂಯಾತ್ಸದಾ ಚಿಂತಿತಸಿದ್ದಯೇ |
सत्यसंतुष्ट दुग्दाब्दे: जात: सत्यपरायण: ।
चिंतामणि: सदा भूयात्सदा चिंतितसिद्दये ।
ಸತ್ಯಪರಾಯಣರ ನಿತ್ಯದಲಿ ಸ್ಮರಿಸುತಿರು
ಸತ್ಯದಲಿ ಕಷ್ಟಗಳ ಕಳೆದು ಕಾಯುವರು
ಸತ್ಯಸಂತುಷ್ಟ ಕರ ಸಂಜಾತ ಧೀಮಂತ
ಸತ್ಯಪಾರಾಯಣ ತೀರ್ಥ ನಾಮಾಂಕಿತ
ಸತ್ಯನಾಮಕ ಮೂಲ ರಾಮನ ಪೂಜಿಸುತ
ನಿತ್ಯ ಹರಿಮತ ಜಗದಿ ಸಾರಿದಂಥ
ರಾಮ ಶಬ್ದಾರ್ಥದ ಮಾಲೆ ಕೃತಿ ರಚಿಸಿ
ರಾಮಚಂದ್ರನ ಮಹಿಮೆ ಜಗದಿ ಮೆರೆಸಿ
ತಮ್ಮ ಗುರುಕರುಣಾ ತಪಬಲವ ತೋರಿಸಿ
ಶ್ರೀ ಮಠದ ಸಿರಿ ಸ್ವತ್ತು ಮರಳಿ ತರಿಸಿ
ಶ್ರೀಸತ್ಯಕಾಮರಿಗೆ ಆಶ್ರಮವ ನೀಡುತಲಿ
ಆಶ್ವಯುಜ ಶುದ್ಧ ಸಪ್ತಮಿ ದಿನದಲ್ಲಿ
ಶ್ರೀಶ ರಾಜವಿಠಲ ಚರಣವ ಸೇರುತಲಿ
ವಾಸಿಪರು ಸಂತೆಬಿದನೂರು ಕ್ಷೇತ್ರದಲಿ
***
No comments:
Post a Comment