Audio by Vidwan Sumukh Moudgalya
ತಿರುಪತಿ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ ವಿರಚಿತ ( ಇಂದಿರೇಶಾಂಕಿತ )
ಶ್ರೀ ಮಹದೇವರ ಸ್ತುತಿ ಪದ
ರಾಗ : ರೀತಿಗೌಳ ಆದಿತಾಳ
ಹರನೇ ನೀ ಎನ್ನ ಪಾಲಿಸು ಜೀಯಾ, ಸುರವರ ಗುಣಗೇಯ॥ಪ॥
ತುಂಗೆ ಕುಮುದೆಯರ ಮಧ್ಯದಲ್ಲಿ, ಸಂಗಮಸ್ಥಳದಲ್ಲಿ, ರಂಗನಂಘ್ರಿಗಳ ಸುಧ್ಯಾನದಲ್ಲಿ,
ಅಂಗಜರಿಪುಭವ, ಸಂಗ ಬಿಡಿಸು ಸತ್ಸಂಗದಿ ಭಾವಿಪನ್ನಂಗ ಪಾದಾರ್ಹ॥೧॥
ಮಾನಸಪತಿಯೆ ನಿನ್ನನು ತುತಿಪೆ,ಸಂತತ ನಾ ನಮಿಪೆ, ಶ್ರೀನಿವಾಸನ ಮಹಿಮೆ ಕಲಾಪೆ,
ಆನನ ನುಡಿವಂತೆ ನೀ ಮಾಡಿಸು ಹರ,ಏನು ಹೆಚ್ಚಿನ ಸುಖ ನಾನು ಬೇಡುವೆನೆ॥೨॥
ಅಂಧಕಾಸುರನ ಜಯಿಸಿದ ಧೀರ, ದುರಿತಾಬ್ಧ ಸಮೀರ,ವಂದಾರು ಜನರ ಕಾಮಿತಪೂರ,
ಬಂದು ಕೊಡುವ ಭವ, ಮಂದಾಕಿನಿಧರ ಇಂದಿರೇಶನು ವಲಿದಂದದಿ ಮಾಡೋ॥೩॥
*****
No comments:
Post a Comment