Saturday, 2 October 2021

ಮುತ್ತಿನಾರುತಿಯ ಮರ್ತ್ಯಾಂಗನೆಯರು ಸತ್ಯನಾರಾಣ ankita indiresha MUTTINAARUTIYA MATYARNGANEYARU SATYANARAYANA

 

Audio by Vidwan Sumukh Moudgalya


 ತಿರುಪತಿ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ ವಿರಚಿತ 

( ಇಂದಿರೇಶಾಂಕಿತ )

 ಶ್ರೀ ಸತ್ಯನಾರಾಯಣದೇವರ ಆರತಿ ಪದ 


 ರಾಗ : ಮಧ್ಯಮಾವತಿ 


ಮುತ್ತಿನಾರುತಿಯ ಮರ್ತ್ಯಾಂಗನೆಯರು 

ಸತ್ಯನಾರಾಣಗೆತ್ತುವರು॥ಪ॥


ಸತ್ಯನಾರಾಯಣ ಸದ್ವ್ರತವ ವಿಸ್ತರಿಸಿಲಿಯೊಳಗತಿ ವಿಭವಾ

ಮರ್ತ್ಯಮುನೆ, ಮರ್ತ್ಯಜೆ,ವಿತ್ತ ಸುರಿದ ಶುಭ ಚಿತ್ತನಿಗೆ॥೧॥


ಭೂಸುರ ವೃತವನು ನೋಡಿದಗೆ ಶ್ರೀ ಶುಭಪೂಜೆಯ ಕೊಂಡವಗೆ

ಭಾಷಿಸುತ, ತೋಷಿಸುತ, ಭೂಸಿರಿ ಸುಖವನು ಸುರಿದವಗೆ॥೨॥


ಚರಣ ಕಾಷ್ಠಕ್ಕೆ ಒಲಿದವಗೆ ಪರಿಚರ್ಯಂಗಳ ಧರಿಸಿದಗೆ

ಕರುಣದಲಿ, ಶರಣದಲಿ, ಸುರವರ ಸಂಪದವೆರೆದವಗೆ॥೩॥


ಊರುಜ ವಂಚನೆ ನೋಡಿದವಗೆ ಚೋರರ ಪದವಿಯನಿತ್ತವಗೆ

ನಾರಿಯರು , ಮೀರಿರಲು,ನೀರೊಳು ಮುಳುಗಿಸಿ ತಾರಿಸಿದಗೆ॥೪॥


ಗೋಪರ ಪೂಜೆಯ ಕೊಂಡವಗೆ, ಅನುತಾಪಿಗೆ ಭೂತಿಯನಿತ್ತವಗೆ

ಖ್ಯಾಪಿಸಲು, ಲೋಪಿಸಲು, ಆಪರಿ ಫಲದಮರೇಶನಿಗೆ॥೫॥


ಜಯ ಜಯ ಸತ್ಯನಾರಾಯಣಗೆ, ಜಯ ಜಯವಿತ್ತವ ನೀಡುವಗೆ

ಭಕ್ತರಿಗೆ, ಭೃತ್ಯರಿಗೆ, ಚಿತ್ರ ಚರಿತ ಶಿರಿ ಇತ್ತವಗೆ॥೬॥


ವೃಂದಾವನ ಶಿರಿ ಭೋಗಿಪಗೆ, ಹೀಂದ್ರಾಚಲ ಮನೆ ಮಾಡಿದಗೆ

ವಂದಿಪಗೆ, ಸಿಂಧುಧರಗೆ , ಬಂಧನ ಕಳೆದಿಂದಿರೇಶನಿಗೆ ॥೭॥

***


No comments:

Post a Comment