Audio by Vidwan Sumukh Moudgalya
ಶ್ರೀ ಪುರಂದರದಾಸಾರ್ಯ ವಿರಚಿತ
ಶ್ರೀಕೃಷ್ಣ ಬಾಲಲೀಲಾ ಸುಳಾದಿ - ೭
ರಾಗ : ಅಠಾಣ
ಧೃವತಾಳ
ಮಣಿ ಮೌಳಿ ಮೊಲ್ಲೆ ಮಲ್ಲಿಗಿಯ ದಂಡೆ
ಗುಂಜೆ ದೊಂಗಲ್ಲು ಉತ್ತಮಾಂಗಾ
ಮಕರ ಕುಂಡಲ ಜಲಜಪತ್ರ ಪಿಂಛೆದೊಂಗಲ್ಲು
ಮೆರೆವ ಕರ್ಣ ಕೌಸ್ತುಭ ಕಮಲ ಮಾಲೆ
ಕಂಬು ಕಂಠ ಶ್ರೀವತ್ಸ ಸಿರಿಗಂಧ ಸಿರಿತುಲಸಿ ಸಿರಿವಕ್ಷಸ್ಥಳ
ಮರಕ ಮಣಿಯ ಕಂಕಣಕಡೆ ತೊಡರು ಸಮಚರಣ
ಹೇಮ ವಸನ ಶ್ಯಾಮ ಕೋಮಲಾಂಗ
ಅಹೋ ಗೋಪಿಯರ ಮೋಹಿಸುತಿದೆ ಕೃಷ್ಣ
ಅಹೋ ಜಗಜ್ಜನರ ಪಾಲಿಸುತಿದೆ
ಅಹೋ ಪುರಂದರವಿಠ್ಠಲನ ಬಾಲಲೇಲೆ
ಅಹೋ ಗೋಪಿಯರ ಮೋಹಿಸುತಿದೆ ॥೧॥
ಮಟ್ಟತಾಳ
ಪೊಂಬಟ್ಟಿಯ ಮೇಲೆ ಕಾಚೀದಾಮವು ಬಳಿಯ ಸುತ್ತಿ
ಜಂಬು ನೀಲ ಚೂತ ಎಳೆದಳಗಳು ಮುಕುಟದ
ಬಾಳೇಗಟ್ಟೀ ಮೇಲೆ ಸುತ್ತಿಕೊಂಡು
ಕಂಬು ಕೊಳಲು ತುತ್ತುರಿ ಮೌರಿಗಳು
ಭೊಂ ಭೊಂ ಭೊಂ ಭೊಂ ಭೋರಿಡುತ
ಝಂ ಝಂ ಝಂ
ಎಂಬೊ ರಾಮಕೃಷ್ಣ ಗೋವಳರ
ಸಂಭ್ರಮವೋ ಸುರರ ನೆಲಸಿತು
ಜಂಭ ಭೇದಿ ಶಂಭು ಅಂಬುಜ
ಸಂಭಾವದಿ ಮುಖ್ಯ ಸುರರನುತ
ಕಂಬುಗ್ರೀವ ತಿರುವೆಂಗಳಪ್ಪ ಪುರಂದರವಿಠ್ಠಲ
ಎಂಬೊ ರಾಮಕೃಷ್ಣರ ಸಂಭ್ರಮ ಸುರರನೊಲಿಸಿತು ॥೪॥
ತ್ರಿವಿಡಿತಾಳ
ಜಯ ಜಯ ಶ್ರೀ ನರಸಿಂಹ ಮಹಭಯ ನಿವಾರಣ
ಜಯ ಜಯ ಶ್ರೀ ದಿವ್ಯ ಸಿಂಹ ಘೋರದುರಿತ ನಿವಾರಣ
ಜಯ ಜಯ ಶ್ರೀ ನರಸಿಂಹ ಮಹಭಯ ನಿವಾರಣ
ಪ್ರಹ್ಲಾದ ಪಾಲಕನೆ ವರದ ನಮೊ ನಮೊ
ಪುರಂದರವಿಠ್ಠಲರೇಯಾ
ಜಯ ಜಯ ಶ್ರೀ ನರಸಿಂಹ
ಸಕಲದುರಿತ ನಿವಾರಣ ॥೩॥
ಅಟ್ಟತಾಳ
ಕಾಮ ಕ್ರೋಧ ಬಿಡದನ್ನಕ ಪರಬೊಮ್ಮನೊಲಿಮೆ
ಎತ್ತ ನೀನೆತ್ತ ಮರುಳೆ ಕಾಮ
ಅಹಂಕಾರ ಮಮಕಾರವಳಿಯದೆ ಶರದಿಶಯನ
ದೊರಕೊಂಬನೆ ಮರುಳೆ
ವಿಹಂಗ ವಾಹನ ದೊರಕೊಂಬನೆ ಮರುಳೆ ಕಾಮ
ಆ ಹರಿದಾಸರ ಪದ ಪದ್ಮಕ್ಕೆರಗದೆ
ಪುರಂದರವಿಠ್ಠಲನು ಸುಲಭನು ಮರುಳೆ ॥೪॥
ಆದಿತಾಳ
ವಾಮನ ವಾಸುದೇವ ಪದ್ಮನಾಭ ಹರೆ ನಾರಾಯಣ
ಪ್ರದ್ಯುಮ್ನ ನಾರಾಯಣ
ಅನಿರುದ್ಧ ಪ್ರದ್ಯುಮ್ನ ಸಂಕರುಷಣ
ವಾಮನ ವಾಸುದೇವ ನಾರಾಯಣ
ಅನಂತ ಅವತಾರ ನಾರಾಯಣ
ಪನ್ನಂಗಶಯನನೆ ನಾರಾಯಣ
ಪುರಂದರವಿಠ್ಠಲನೆ ನಾರಾಯಣ
ತಿರುವೆಂಗಳಪ್ಪ ನಾರಾಯಣ
ವಾಮನ ವಾಸುದೇವ ನಾರಾಯಣ ॥೫॥
ಜತೆ
ಮನೋವಚನಗಳಲ್ಲಿ ಕಾಯಕರ್ಮಗಳಲ್ಲಿ
ಕಾಯೋ ಕೊಲ್ಲೊ ನಂಬಿದೆ ಪುರಂದರವಿಠ್ಠಲ ॥೬॥
***
No comments:
Post a Comment