Monday, 6 September 2021

ಪರಿಮಳ ಪಾದಪಂಕಜಾ ನೆರೆನಂಬಿದೆ ಗುರುರಾಜಾ ankita vittalesha

 ankita ವಿಠಲೇಶ  

ರಾಗ: ಪಹಾಡಿ ತಾಳ: ದಾದರಾ


ಪರಿಮಳ ಪಾದಪಂಕಜಾ


ನೆರೆನಂಬಿದೆ ಗುರುರಾಜಾ

ಪರಿಪಾಲಿಸು ಗುರು ಸುಧೀಂದ್ರಜಾ  ಅ.ಪ


ನಿರುತ ನಿನ್ನ ನೆನೆದು

ಮೊರೆಯಿಡುವೆ ಮುನಿರಾಯಾ

ಪರಿಮಳಾರ್ಯ ಪ್ರಭುದೇವಾ

ಪರಿತೋಷಿಸು ಕರುಣಾಸಾಗರಾ 1

ತಂದೆ ನೀನೆ ತಾಯಿಯು ನೀ

ಎಂದು ನಿನ್ನ ಪೊಂದಿದೆನೊ

ಚಂದ್ರಿಕಾರ್ಯ ಕವಿಗೇಯಾ

ಕುಂದದ ಕೃಪೆದೋರು ಶ್ರೀ ಗುರು 2

ಎಲ್ಲಿ ಕಾಣೆ ಕಾಯುವರಾ

ಪ್ರಹ್ಲಾದನೆ ನಿನ್ನುಳಿದು

ಚೆಲ್ವವಿಠಲೇಶಪ್ರಿಯಾ-

ನಲ್ಮೆಯ ಮೊರೆಗಾಣಿಸೋ ಪ್ರಭು 3

***


No comments:

Post a Comment