Wednesday, 1 September 2021

ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ankita vijaya vittala

 ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ||ಪ||


ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ ||ಅ.ಪ||


ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು|

ಜ್ಞಾನಿಗಳ ಸಹವಾಸ ಮಾಡದಲೆ|

ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ|

ಮೀನು ಗಾಣಕೆ ಬಿದ್ದು ಮಿಡುಕುವಂದದಲಿ|| 1||


ಸರಸರನೆ ಕಂಠವನು ಗರಗಸದಿ ಕೊಯ್ದರೂ|

ತರಹರಿಸದೇ ಪರರ ಮನೆಯನ್ನವನ್ನು|

ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ|

ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ||2||


ಪರರಿತ್ತ ಕೂಳಿನಲಿ ಅವರ ಕುಲಕೋಟಿ -|

ಸಾವಿರ ಜನುಮದಲಿ ಅರ್ಜಿಸಿದ ಪಾಪ

ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ|

ಹರುಷದಿಂ ಕುಳಿತು ವಿಷವುಂಬ ಪಾತಕಿಗೆ|| 3||


ಯಾತ್ರೆಯ ಪೋಪಲ್ಲಿ ತಿಥಿ ಮತಿ ಹವ್ಯದಲಿ|

ಮತ್ತೆ ಕುಲಹೀನದಲಿ ಅನ್ನ ತಿಂದು|

ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ|

ತೊತ್ತು ಬಡುಕಗೆ ಪುಣ್ಯವೆತ್ತ ದೊರಕುವುದೊ|| 4||


ಕ್ಷಿಪ್ರ ಪ್ರಾಯಶ್ಚಿತ್ತ ಪೊಂದಿಹುದು ಕೇಳಯ್ಯಾ|

ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ|

ಕಾಯ ವಿಜಯವಿಠ್ಠಲರೇಯ

ಸುಪ್ರಸಾದವನಿತ್ತು ಶುದ್ಧಾತ್ಮನನು ಮಾಡು|| 5||

***

ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ|| ಪ||

ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ|| ಅ.ಪ||

ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು|

ಜ್ಞಾನಿಗಳ ಸಹವಾಸ ಮಾಡದಲೆ|

ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ|

ಮೀನು ಗಾಣಕೆ ಬಿದ್ದು ಮಿಡುಕುವಂದದಲಿ ||1||

ಸರಸರನೆ ಕಂಠವನು ಗರಗಸದಿ ಕೊಯ್ದರೂ|

ತರಹರಿಸದೇ ಪರರ ಮನೆಯನ್ನವನ್ನು|

ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ|

ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ||2||

ಪರರಿತ್ತ ಕೂಳಿನಲಿ ಅವರ ಕುಲಕೋಟಿ -|

ಸಾವಿರ ಜನುಮದಲಿ ಅರ್ಜಿಸಿದ ಪಾಪ

ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ|

ಹರುಷದಿಂ ಕುಳಿತು ವಿಷವುಂಬ ಪಾತಕಿಗೆ ||3|

ಯಾತ್ರೆಯ ಪೋಪಲ್ಲಿ ತಿಥಿ ಮತಿ ಹವ್ಯದಲಿ|

ಮತ್ತೆ ಕುಲಹೀನದಲಿ ಅನ್ನ ತಿಂದು|

ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ|

ತೊತ್ತು ಬಡುಕಗೆ ಪುಣ್ಯವೆತ್ತ ದೊರಕುವುದೊ||೪*||

ಕ್ಷಿಪ್ರ ಪ್ರಾಯಶ್ಚಿತ್ತ ಪೊಂದಿಹುದು ಕೇಳಯ್ಯಾ|

ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ|

ಕಾಯ ವಿಜಯವಿಠ್ಠಲರೇಯ

ಸುಪ್ರಸಾದವನಿತ್ತು ಶುದ್ಧಾತ್ಮನನು ಮಾಡು|| 5||

***


No comments:

Post a Comment