ಪದ್ಯ :
ಶ್ರೀ ಲತಾಂಗಿರ ರಮಾ ಕೃಷ್ಣನು ಬಾಲ ಲೀಲೆಯ ಜಗಕೆ ತೋರಿದ /
ಆಡಿ ಪಾಡುತ ಕೂಡಿ ರಮಿಸುತ ಗಾಡಿಕಾರನು ಅವಳ ಹೆಗಲೇರಿಸಿ /
ಆಗರು ಕಸ್ತೂರಿ ಪೂಸಿ ಹೃದಯಕೆ ಮೊಗರು ಕುಚಗಳ ಮುಖದ ಕಮಲವು /
ತಾನೇ ಸುಂದರಿ ಎಂದು ಗರ್ವಿಸೆ ದೀನನಾಥನು ಅದೃಶ್ಯನಾದನು /
ಎತ್ತ ಪೋದನೋ ರಂಗ ಏನುತಲಿ ಚಿತ್ತ ಭ್ರಮೆಯಲಿ ಹುಡುಕುತಿದ್ದರು /
ಎಲ್ಲಿ ಪೋದನೋ ಕೃಷ್ಣ ಎನುತಲಿ ಮತ್ತೆ ಸಖಿಯರು ಹುಡುಕುತಿದ್ದರು./
ಇತ್ತ ಗೋಕುಲಾದೊಳಗೆ ಸ್ತ್ರೀಯರು ಮತ್ತೆ ಕೃಷ್ಣನ ಪಾದ ಕಾಣದೆ /
ಗಿಳಿಯು ಕೋಗಿಲೆ ಹಂಸ ಭ್ರುಂಗನೇ ನಳಿನ ನಾಭನ ಸುಳಿವು ಕಂಡಿರಾ /
ಕಂದಮೂಲವೇ ಜಾಜಿ ವೃಕ್ಷವೇ ಇಂದಿರೇಶನ ಸುಳಿವು ಕಂಡಿರಾ /
ಮಂದಭಾಗ್ಯರ ಮಾಡಿ ಪೋದನು ಶ್ರುತಿಗೆ ಸಿಲುಕಿದ ದೋಷ ದೂರನೇ /
ವ್ರತವ ಕೆಡಿಸಿದಿ ಎಲ್ಲಿಗ್ಹೋಗೋಣ ಇಷ್ಟು ಪರಿಯಲಿ ಸ್ತೋತ್ರ ಮಾಡಲು /
ರಂಗರಾಯನು ಬಂದು ಸೇರಿದಾ ಮದನನಯ್ಯಮುದದಿ ನೆನೆದರೆ /
ನದಿಯ ತೀರದಿ *ವಿಜಯವಿಠಲನ * ನದಿಯ ತೀರದ ತೀರ್ಥ ಪಾದನು /
ಸಲಹಿ ಭಕುತರ ಪಾಲಿಸುವನು.
***
ಶ್ರೀ ವಿಜಯದಾಸರ ಕೃತಿ.
ಪ್ರಸಂಗ : ಶ್ರೀ ಕೃಷ್ಣ ಪರಮಾತ್ಮನ ಕೊಳಲ ಧ್ವನಿಗೆ ಮೈಮರೆತು ರಾತ್ರಿ ಸಮಯ ಎಂದು ನೋಡದೆ, ತಮ್ಮ ಮನೆ, ಗಂಡ, ಮಕ್ಕಳನ್ನು ಬಿಟ್ಟು ಕೃಷ್ಣ ನಿರುವಲ್ಲಿಗೆ ಗೋಪಿಕಾ ಸ್ತ್ರೀಯರು ಬರುತ್ತಾರೆ. ಆಗ ಪರಮಾತ್ಮನು ಇಂಥಾ ರಾತ್ರಿ ಮನೆ, ಗಂಡ, ಮಕ್ಕಳನ್ನು ಬಿಟ್ಟು ಯಾಕೆ ಬಂದಿರಿ ಎಂದು ಕೇಳಿದಾಗ ಗೋಪಿಕೆಯರು, "ನಾವು ನಿನ್ನ ಸೇವೆಯನ್ನು ಮಾಡಿ ಉದ್ಧಾರವಾಗಲು ಬಂದಿರುವೆವು, ನಮ್ಮನ್ನು ನಿರಾಸೆ ಗೊಳಿಸಬೇಡ " ಎಂದು ಕೃಷ್ಣನನ್ನು ಪ್ರಾರ್ಥಿಸಿದಾಗ ಪರಮಾತ್ಮನು ಬೆಳದಿಂಗಳಬೆಳಕಲ್ಲಿ ಅವರನ್ನು ಸಂತೋಷ ಗೊಳಿಸುವನು. ಅದರಿಂದ ಅವರಿಗೆ ಗರ್ವ ಬರಲು ಪರಮಾತ್ಮನು ಅದೃಶ್ಯ ನಾಗುವನು. ಆಗ ಎಲ್ಲರೂ ದುಃಖದಿಂದ ಹುಚ್ಚು ಹಿಡಿದಂತಾಗಿ ಗಿಡ ಮರಗಳನ್ನು ಕೇಳುತ್ತ, ಅಳುತ್ತ ಹೋಗುತ್ತಿರಲು ಒಂದು ಕಡೆ ಕೃಷ್ಣನ ಹೆಜ್ಜೆ ಕಂಡವು. ಆ ಹೆಜ್ಜೆಯ ಬಳಿ ಗೋಪಿಕೆಯ ಹೆಜ್ಜೆ ಕಂಡು ಬೇರೊಬ್ಬಳ ಜೊತೆ ಕೃಷ್ಣ ಹೋಗಿರಬಹುದು ಎಂದು ಆಲೋಚಿಸಿದಾಗ ಆ ಬೇರೊಬ್ಬಳಿಗೂ ಅಹಂಕಾರಬರಲು ಅಲ್ಲಿಂದ ಲೂ ಕೃಷ್ಣ ಮಾಯವಾದಾಗ ಎಲ್ಲರೂ ಸೇರಿ ಪರಮಾತ್ಮನ ಸ್ತುತಿಯನ್ನು ಸ್ತುತಿಸುವರು. ಈ ಸಂದರ್ಭವನ್ನು ಶ್ರೀ ವಿಜಯದಾಸರು ಬಲು ಸುಂದರವಾಗಿ ರಂಜನೀಯ ವಾಗಿ ವಣಿಸಿದ್ದಾರೆ.
ಹೀಗೆ ಅವನ ಸ್ತೋತ್ರ ಮಾಡುತ್ತಿರಲು ಪರಮಾತ್ಮನು ಗೋಪಿಕೆ ಯರಿಗೆ ದರುಶನ ಕೊಟ್ಟು ಅವರ ಅಭೀಷ್ಟವನ್ನು
ಪೂರೈಸಿದನು ಎಂದು ದಾಸರು ಅದ್ಭುತವಾಗಿ ವರ್ಣಿಸಿದ್ದಾರೆ ಈ ಪ್ರಸಂಗವನ್ನು.
ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ವಿಜಯ ವಿಠಲಾತ್ಮಕ ಶ್ರೀ ಕೃಷ್ಣಾರ್ಪಣಮಸ್ತು
***
No comments:
Post a Comment