ankita tandepurandara vittala
ರಾಗ: ಶಂಕರಾಭರಣ ತಾಳ: ಆದಿ/ಛಾಪು/ಅಟ
ನಮಿಸುವೆ ಗುರುವೆ ನಿನಗೆ ನಮಿಸುವೆ ಪ
ನಮಿಸುವೆ ಗುರು ರಾಘವೇಂದ್ರ ಎನ್ನ
ಕ್ಷಮಿಸಬೇಕಯ್ಯ ನೀನೀಗ ಅಹಂ-
ಮಮತೆ ಹಿಂಗದು ಸಮಚಿತ್ತ ಬರದು
ವಿಮಲಜ್ಞಾನ ಹೇ ಕರುಣಿಸಬೇಕಯ್ಯ ಅ.ಪ
ತುಂಗಾತೀರದಲಿವಾಸ ಬಹು
ಮಂಗಳವಯ್ಯ ಪ್ರದೇಶ ನಮ್ಮ
ರಂಗನದಾಸ ವಿಶೇಷ ನಿನ್ನ
ಸಂಗಡ ಮಾಡೋರುವಾಸ ||ಆಹ||
ಕಂಗೆಟ್ಟು ನಿನ್ನಲಿ ಬರುವ ಭಕುತರಿಗೆ
ತುಂಗಸಂಕಟ ಕಳೆದು ಮಂಗಳ ನೀಡುವ 1
ಕರೆದಾಗಲೆ ನೀನು ಬರುವಿ ಬಿರುದು
ಕರುಣನೆಂದು ಧರಿಸಿರುವಿ ನಿನ್ನ
ಚರಣಶರಣರನು ಪೊರೆವಿ ಬಂದು
ಧರೆಯೊಳು ಅಲ್ಲಲ್ಲೆ ಇರುವಿ ||ಆಹ||
ವರಜಟೆಗಳಪೊತ್ತು ಬದರಿಯ ಮನೆಮಾಡಿ
ನಿರುತವು ಶೋಭಿಪ ಗರುಡವಾಹನದಾಸ 2
ಮಧ್ವಮತವೆಂಬಅಭ್ಧಿಯಲ್ಲಿ
ಉದ್ಭವಿಸಿದ ದಿವ್ಯಜ್ಯೋತಿ ಶುದ್ಧ
ಸತ್ತ್ವ ಗುಣಗಳ ರಾಶಿ ಪರ-
ತತ್ತ್ವ ವಿಷಯ ಉಪದೇಶಿ ||ಆಹ||
ಅದ್ಭುತಚರಿತನೆ ಆಪಾರಮಹಿಮನೆ
ವಿಶ್ವನಾಮಕ ತಂದೆಪುರಂದರವಿಠಲನದಾಸ 3
***
No comments:
Post a Comment