Monday 6 September 2021

ಜೋ ಜೋ ಜೋ ಶ್ರೀ ರಾಘವೇಂದ್ರರ ಜೋಗುಳ ಪದ ಜೋ ಜೋ ankita sirivittala

ankita ಸಿರಿವಿಠಲ 

ರಾಗ: [ನವರೋಜû] ತಾಳ: [ತಿಶ್ರನಡೆ]


ಜೋ ಜೋ ಜೋ ಶ್ರೀ ರಾಘವೇಂದ್ರರ 

ಜೋಗುಳ ಪದ ಜೋ ಜೋ ಪ.


ಜೋ ಜೋ ಜೋ ಜೋ ಗುರು ರಾಘವೇಂದ್ರಾ

ಜೋ ಜೋ ಶುಭಗುಣಸಾಂದ್ರ ಯತೀಂದ್ರಾ ಅ. ಪ


ನರಹರಿಯೊಲಿಸಿದ ಬಾಲ ಪ್ರಹ್ಲಾದ

ಸಿರಿಕೃಷ್ಣನರ್ಚಕ ವ್ಯಾಸ ಯತೀಂದ್ರ ಜೋ ಜೋ 1

ಗುರು ಮಧ್ವಮತವನುದ್ಧರಿಸಿದ ಮಹಿಮಾ

ಸಿರಿ ರಾಮ ಸೇವಕ ಗುರು ಸಾರ್ವಭೌಮ ಜೋ ಜೋ 2

ತಂದೆ ಸಿರಿವಿಠಲನ ಆಜ್ಞೆಯಿಂ ಬಂದೂ 

ನಿಂದೆ ವೃಂದಾವನದಿ ನಿಜ ಭಕ್ತ ಬಂಧು ಜೋ ಜೋ 3

***


No comments:

Post a Comment