Wednesday, 1 September 2021

ರಂಗನ ಪಾಡಿರೈ ಮಾನವ ಸಿಂಗನ ಪಾಡಿರೈ ankita shyamasundara

 ..

ರಂಗನ ಪಾಡಿರೈ | ಮಾನವ ಸಿಂಗನ ಪಾಡಿರೈ ಪ


ಇಂಗಡಲಜೆಪತಿ | ಮಂಗಳ ಚರಿತ ಭು

ಜಂಗಶಾಯಿ ಶುಭಾಂಗ ಅ.ಪ


ವಸುಗರ್ಭಾದಿಗಳ ಮೊರೆಯನು |

ಲಾಲಿಸಿ ದೇವ | ಮಹಾನುಭಾವ |

ವಸುದೇವನ ಸತಿಯುದರದೊಳು

ಅವತರಿಸಿದನು ಅಸುರಾಂತಕ |

ಹಸುಗಳ ಸಲುಹಿದ ಕುಸುಮನಯನ

ಪ್ರೇಮದಲಿ ಗೋಕುಲದಲ್ಲಿ |

ಶಿಶುಪಾಲಾದಿಗಳಸುನೀಗಿದ ಯದು ನಾಥ | ವಿಧಿ ಕುಲ ಜಾತ 1


ತಂದೆ ತಾಯ್ಗಳ ಬಂಧನ ಬಿಡಿಸಿದ ಧೀರ | ಭಕ್ತಮಂದಾರ |

ಒಂದೆ ಬೆರಳಲಿ ಗೋವರ್ಧನ ಶೈಲವನು | ತಾ ಧರಿಸಿದನು

ವೃಂದಾರಕ ಪತಿಗೊದಗಿದÀ

ಮದವನು ಮುರಿದ | ಮೋದವಗರೆವ

ಸಿಂಧುಶಯನ ತನಗ್ಹೊಂದಿದ

ಶರಣರ ಕರವ | ಕರುಣದಿ ಪಿಡಿವ 2


ನಾಮವೇದ್ಯ ಬಲರಾಮನನುಜ ಹರಿ | ಶ್ವೇತ ವಾಹನ ಸೂತ

ಕಾಮಜನಕ ಸತ್ಯಭಾಮೆ ರಮಣ ಗೋಪಾಲ | ಸ್ವಾಮಿ ಕುಲಾಲ

ಭೀಮಗೊಲಿದ ನಿಸ್ಸೀಮ ಮಹಿಮಾ ಶ್ರೀ ಗೌರಿ | ಮಾತುಳವೈರಿ

ಹೇಮಾಂಬರಧರ ಶಾಮಸುಂದರ ವಿಠಲ | ಧೃತವನಮಾಲ3

***


No comments:

Post a Comment