ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ
ಪಾಣಿಯೊಳಗೆ ಬಂದು ಕಾಣಿಸಮ್ಮ ಪ
ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ
ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ
ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ
ದನಕರ ಹೊಲಮನೆಯನು ಮಾರಿದೆ
ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ
ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1
ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ
ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ
ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ
ಒಡೆಯರ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2
ಎಷ್ಟೆಂತ ಹೇಳಲಿ ಮಡದಿಯ ಗೋಳಾಟ ತಾಳಿ ಹೊರೆತು
ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು
ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3
ಚಾರರುಭಯರಲ್ಲಿ ಸೇರಿ ಬಂದಾಕ್ಷಣ
ಹಾರಿ ಹೋಗುವದಮ್ಮಾ ಪಕ್ಕಾರಂಗು
ಧಾರುಣೀಶರ ಮಧ್ಯ ತೋರೀದ ಸಮಯದಿ
ಆ ರಾಣಿ ವರ್ಗವ ಥರ ಥರ ನಡುಗಿಸುವಿ 4
ಅಕ್ಕರದಲಿ ಎರಡೆಕ್ಕದೊಳು ಬಂದು
ಪಕ್ಕನೆ ನೀ ಎನ್ನ ಕೈಯೊಳು ಬಾರೆ
ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ
ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5
ಕಾಮಿತ ದಾಯಿನಿ ಕಾಮಿನಿ ಶಿರೋಮಣಿ
ಶಾಮಸುಂದರ ಸಾರ್ವಭೌಮನ ರಾಣಿ
ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ
ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
***
No comments:
Post a Comment