..
ಎಂದ ಮಾತು ಚಂದವಾಯಿತಿಂದು ಗೋಪಿ-ಮುನಿ-ಸಿಂದ ನಮ್ಮನಾಡಲೇಕೆ ನಂದಗೋಪಿ ಪ
ಭಂಟ ನಂಟರನ್ನು ಮಾತಿನಿಂದ ಹೋಗಿ-ಬರಿಕಂಟಕದ ನುಡಿಗಳಿನ್ಯಾಕೆ ಗೋಪಿ 1
ಕರಿಯ ಭಂಟ ಕಳ್ಳ ಕೃಷ್ಣ ಕಾಣೆ ಗೋಪಿ- ಹತ್ತಿಲಿರುವ ಹರಿಯು ಬಲು ತುಂಟ ಕಾಣೆ ಗೋಪಿ2
ಹರವಿ ಹಾಲ ಬರಿದು ಮಾಡಿ ಬಂದ ಗೋಪಿ-ಎನ್ನಸೆರಗ ಪಿಡಿದು ಬಿಡೆನೆಂದ ಕಾಣೆ ಗೋಪಿ 3
ಅಪರಿಮಿತದಾಟಗಾರನಿವ ಗೋಪಿ-ಕೃಷ್ಣಕಪಟನಾಟಕ ಸೂತ್ರಧಾರ ಗೋಪಿ4
ತಿರುಪತಿಯ ತಿಮ್ಮರಾಯನಿವ ಗೋಪಿ-ಗೊಲ್ಲಗರತಿಯರ ಕಂಡರೆ ಸುಪ್ರೀತ ಗೋಪಿ 5
ಶರಣ ಜನರ ಸಿಧ್ಧಿ ಕೊಡುವ ದಾತ ಗೋಪಿ-ನಾವುಪುರದೊಳಿರುವ ತೆರನ ಮಾಣೆ ಜಾಣೆ ಗೋಪಿ 6
ನಿಪುಣ ಬೆಣ್ಣೆ ಕಳ್ಳ ನಿನ್ನ ಮಗನೆ ಗೋಪಿ-ನಮ್ಮತಪಸಿಗೊಲಿದು ಜನಿಸಿದ ಶ್ರೀಕೃಷ್ಣ ಗೋಪಿ 7
***
pallavi
endamAtu cenda vAyitindu gOpi munisinda namma nADalEke nanda gOpi
anupallavi
bhaNDa nanTarannu mADi ninna gOpi bari kanTakAdanuDigaLi nADe gOpi
caraNam 1
haravi hAla baridu mADi banda gOpi enna seraga piDidu bidEnenda kANE gOpi
caraNam 2
aparimIta dATagana ninna gOpi krSNa kapaTa nATaka sutradhAra kANE gOpi
caraNam 3
sharaNa janara siddhi koDuva ninna gOpi nAvu puradoLiruva terana mADE jANe gOpi
caraNam 4
nipuNa beNNe kaLLa ninna maganE gOpi namma tapasi golidu janisida shrI krSNa gOpi
***
No comments:
Post a Comment