..
ಒಂದರಿಂ ಸುಖವಿಲ್ಲ ಹುಟ್ಟು ಮೊದಲು ಡಂಭ- ಪ
ದಿಂದ ಭೈರೂಪ ತೊಟ್ಟು ತಿರುಗುತಿದೆ ಅ.ಪ
ಕಾಯ ದುರಾಸೆಯಲಿ ಕರಗಿಹೋಯಿತು ವೃಥಾಪ್ರಾಯದಿರುವಿಕೆಯು ಬಯಲಾಗಿ ಹೋಯ್ತುಸಾಯ ಬಟ್ಟೆ ಸಂಸಾರ ವಿಷಯ ಕೋಟಲೆಗೊಂಡುನಾಯ್ ಬಾಯ ಕೊಚೆಯಂತೆ ನಸಿಯುತಿದೆ ದೇಹ 1
ಬುದ್ಧಿ ದೃಢ ದುರ್ಮಾರ್ಗದಿಂದ ನೋಡದೆ ಹೋಯ್ತುಶುದ್ಧ ಸತ್ಕರ್ಮವಿಲ್ಲದೆ ಸೂರೆ ಹೋಯ್ತುದುರ್ದೆಸೆಯ ಪಥದ ಲಂಪಟ ಮಾಯಕೆ ಸಿಲುಕಿಮದ್ದಳೆಯ ಇಲಿಯಂತೆ ಆಯಿತೀ ದೇಹ 2
ಭೋಗ ಸಂಗವಮಾಡಿ ಪೋಗಲೈಸಿತು ದೇಹರಾಗಲೋಭವು ಹೆಚ್ಚಿ ವೈರಾಗ್ಯ ಹೊಯ್ತುಆಗಮವ ತಿಳಿಯದೆ ಕೃಷ್ಣನ್ನ ಧ್ಯಾನಿಸದೆಜೋಗಿ ಕೈ ಕೋಡಗನಂತೆ ತಿರುಗುತಿದೆ 3
***
No comments:
Post a Comment