Sunday 5 September 2021

ದಾಸರ ಸಖ ಮಾಡಂದೆ ಎನ್ನ ಧ್ಯಾಸದಿರಗಲದೆ ಶ್ರೀಹರಿ ತಂದೆ ankita ramadasa

 ರಾಮದಾಸರು 

ದಾಸರ ಸಖ ಮಾಡಂದೆ ಎನ್ನ ಧ್ಯಾಸದಿರಗಲದೆ ಶ್ರೀಹರಿ ತಂದೆ ಪ 


ಕನಕರಾಯನು ನಿಜದಾಸ ನಿನ್ನ ಘನತರ ಪ್ರಸನ್ನತೆ ಪಡೆದನುಮೇಷ ಅನುದಿನ ನಿಮ್ಮಯ ಘನಮಹಿಮೆಯನು ತೋರಿ ಮುನಿವ್ಯಾಸರಾಯರ ಮನವ ತಣಿಸಿದಂಥ 1 

ಘನ ಸತ್ಯ ಕಬೀರದಾಸ ತನ್ನ ತನುಮನಧನವನ್ನು ನಿನಗರ್ಪಿಸೀತ ವನಿತೆಯನೊತ್ತಿಟ್ಟು ತನುಜಾತನನು ಕೊಂದು ಉಣಿಸಿ ಸಂತರಿಂ ಸುತನ ಪ್ರಾಣವ ಪಡೆದಂಥ 2 

ವಾಸನಳಿದು ಪುರಂದಾಸ ತನ್ನ ನಾಶಬುದ್ಧಿಗೆ ನಾಚಿ ನೀಗಿ ಮನದಾಸೆ ಸೋಸಿಲಿಂ ತವಪಾದಧ್ಯಾಸ ಬಲಿಸಿ ಜಗದೀಶ ಹೇಸದೆ ನಿಮ್ಮನು ಗಿಂಡಿಲ್ಹೊಡೆದಂಥ 3 

ವರನಾಮದೇವ ನಿಜದಾಸ ತನ್ನ ಪರಮಸಂತರಿಗೆಲ್ಲ ಪಾಲಿಸಿ ಭಾಷ ಸಮ ಗೌಪ್ಯದಿಂ ಪಂಪಾಪುರಿಗೈದಿರಲು ನಿನ್ನ ತಿರುಗಿ ಕರೆದೊಯ್ದು ಇರವ ಪೂರೈಸಿದಂಥ 4 

ಬಲ್ಲಿದ ತುಕಾರಾಮದಾಸ ಬಲು ಕ್ಷುಲ್ಲಕರುಪಟಳ ಸಹಿಸಿ ಮನದಕ್ಲೇಶ ಎಲ್ಲವ ನೀಗಿ ಹರಿ ಪುಲ್ಲನಾಭನ ಪಾದ ದಲ್ಲೆ ಮನ ನಿಲ್ಲಿಸಿ ಉಲ್ಲಾಸದಿರುವಂಥ 5 

ಬಗೆಯ ತಿಳಿದು ಜಗನ್ನಾಥ ನಿಮ್ಮ ಸುಗುಣದರಿದು ವ್ಯಾಧಿ ಕಳೆದುಕೊಂಡು ಪ್ರಮಥ ನಿಗಮಗೋಚರ ನಿನ್ನ ಬಗೆಬಗೆ ಪೊಗಳುತ ಜಗದಮಾಯವ ಗೆಲಿದು ಸೊಗಸಿನಿಂ ನಲಿವಂಥ 6 

ಉದಧಿಜಿಗಿದ ಹನುಮಂತ ಮಹ ಪದುಮಾಕ್ಷಿಯಳ ಕಂಡು ನಮಿಸಿದ ಬಲವಂತ ಸದಮಲಾಂಗಿಗೆ ತನ್ನ ಹೃದಯಸೀಳಿದ್ಹಟದಿಂ ಪಾದ ತೋರಿಸಿದಂಥ 7

***


No comments:

Post a Comment