Monday 6 September 2021

ಕ್ಷಮಿಸಬೇಕಯ್ಯ ಜೀಯ್ಯಾ ಗುರು ರಾಘವೇಂದ್ರರಾಯ ankita prahladavarada vittala

ankita ಪ್ರಹ್ಲಾದವರದ (ವರದಪ್ರಹ್ಲಾದ)ಶ್ರೀಹರಿವಿಠಲ

ರಾಗ: ಬಿಲಹರಿ ತಾಳ: ಆದಿ


ಕ್ಷಮಿಸಬೇಕಯ್ಯ ಜೀಯ್ಯಾ ಗುರು ರಾಘವೇಂದ್ರರಾಯ

ನಮಿಸಿ ಬೇಡುವೆನಯ್ಯ ಗುರುರಾಯ


ಕರುಣಾಕರ ನಿಜಶರಣಾಭೀಷ್ಟದ

ಚರಣಸೇವಕನ ಸರುವಪರಾಧವ ಅ.ಪ


ಅಂದು ಪ್ರಹ್ಲಾದನಾಗಿ ಬಂದು ನೀನವತರಿಸಿದೆ

ಇಂದಿರೇಶನ ಭಕ್ತಿ ಮಾಡ್ದೆ ನೀ ಪಾಡ್ದೆ

ಒಂದಿಗಿಹ್ಯರ ಕೂಡೆ ಹರಿಯೆ ಪರದೈವವೆಂದೆ

ಛಂದದಿಂದವರ ಕೂಡಿ ಕುಣಿದೆ ನೀಮಣಿದೆ

ತಂದೆಕೊಟ್ಟಂಥ ತೊಂದರೆಗಳಜರಿದು

ಇಂದಿರೆಯರಸನೆ ಎಂದೆಂದಿಗುಗತಿಎಂದೆ

ಕುಂದದೆ ಸರ್ವತ್ರ ತುಂಬಿಹನೆಂದೆಂದು

ಕಂಭದಿ ನೃಹರಿಯತೋರ್ದೆ ನೀ ಜಗಕೆ 1

ವ್ಯಾಸಮುನಿಯೆ ನಿಮ್ಮ ಸಾಸಿರಾನಂತ ಮಹಿಮೆ

ಲೇಸಾಗಿ ಪೊಗಳುವರು ದಿವಿಜಾರು

ಏಸಾರವನು ನಾನು ಈಸುವರ್ಣಿಸಲರಿಯೆ

ಕ್ಲೇಶಪಂಕದಿ ಬಿದ್ದು ನಾನಿದ್ದು

ಆಶೆಯೊಳಗುಆಗಿ ದೋಷರಾಶಿಗಳನ್ನು

ಬೇಸರಿಲ್ಲದೆ ಸಂಪಾದಿಸಿ ಹೊತ್ತಿಹೆ

ವಾಸುದೇವನ ಮಾಯಾಪಾಶಬದ್ಧನುಆದೆ

ಸಾಸಿರಫಣನಾವೇಶನೆ ಸಲಹೊ 2

ಮೆರೆವೊ ಮಂತ್ರಾಲಯಪುರಮಂದಿರವಾಸ

ದುರಿತಜೀಮೂತವಾತ ಹೇತಾತ

ಗುರುರಾಜ ರಾಘವೇಂದ್ರ ನಮೋ ನಮೋ ಪಾಹಿ ಪಾಹಿ

ಅಮಿತದುರ್ಗತಿಭಂಜನ ನಿರಂಜನ

ಸುರವರಸಜ್ಜನ ನರತತಿಗಳಿಗೆಲ್ಲ

ಪರಿಮಳಬೀರಿದ ಸುರಚಿರಗಾತ್ರನೆ

ನಿರಯವತಪ್ಪಿಸಿ ಮರುತಾಂತರ್ಗತ

ವರದಶ್ರೀಪ್ರಹ್ಲಾದಹರಿವಿಠಲನ ತೋರಿ 3

***


No comments:

Post a Comment