ರಾಗ - : ತಾಳ -
ಕೊಡಬಾರದೇನೈಯ್ಯಾ ದೃಢ ಭಕುತಿಯಾ l
ಕೊಡಬಾರದೆಂಬೋದಿದುದಾವ ನ್ಯಾಯಾ ll ಪ ll
ಹಿಂದೆ ಅತಿರಥರು ಮಹಾರಥರು ನಿಮ್ಮನು ಪೊಂದ್ಯಾ l
ನಂದ ಪದವಿಯನವರು ಐದಲಿಲ್ಲೆ l
ಇಂದು ಎನ್ನನು ಹಾಗೆ ಕರುಣದಲಿ ಮುಕ್ತಿ ಪಥ l
ಪೊಂದುವಂದದಿ ಮಾಡೊ ಇಂದಿರೇಶ ಸಿರಿ ಕೃಷ್ಣಾ ll 1 ll
ತಾ ತಾಯೆಂದರೆ ವರವ ಕೊಕೊ ಯನುತಲಿ ಕೊಟ್ಟಾ l
ನಾಥರಕ್ಷಕನೆಂಬೋದದು ಮಿಥ್ಯವೆ l
ಭೂತಳದಿ ಬಡಭಕ್ತ ಆತೂಕೊಂಡಿಹ್ಯೆ ಜಲ್ಮ l
ಸಾರ್ಥಕವಮಾಡೊ ಸರುವೋತ್ತಮ ಶ್ರೀ ಕೃಷ್ಣ ll 2 ll
ನಾರಾಯಣನೆಂಬೊ ನಾಲ್ಕಕ್ಷರದಲಿ ಅವರು l
ಸೂರೆಗೊಳ್ಳಲಿಲ್ಲವೆ ಸ್ವರ್ಗವನ್ನೂ l
ಈ ರೀತಿಯಲ್ಲಿ ಯನಗೆ ಸಾರಥಿ ನೀಯಾಗಿ ಮುಂದೆ l
ಪಾರುಗಾಣಿಸಿ ಪೊರೆಯೊ ಪ್ರದ್ಯುಮ್ನವಿಟ್ಠಲಾ ll 3 ll
***
No comments:
Post a Comment