ದಾಸನಾದೆನಯ್ಯ ನಿಮ್ಮ ಏಸು ಜನ್ನಕೆ ವಾಸನೆ ಪರಿದ್ಯೋ ಶ್ರೀ ಹರಿ ಎನ್ನ ಜೀವಕೆ pa
ಒಂದು ಮೊದಲಿಗಲ್ಲದೆ ಅನೇಕ ಜನ್ಮ ಜನಿಸಿ ಬಂದು ನೊಂದು ಬೆಂದು ಕಂದಿ ಕಳದೆನಯ್ಯ ಭಕ್ತ ವತ್ಸಲ 1
ವರ್ಮ ತಿಳಿಯಗೊಡದೆ ಎನ್ನ ಕವರ್iಪಾಶ ಕಟ್ಟಿ ಕೊರಳ ನಿರ್ಮಿಸಿ ನಿರ್ಮಿಸಿ ತಂದ್ಯೊ ನಿರ್ಮಳಾನಂತಾತ್ಮನೆ 2
ತಪ್ಪಿಲ್ಲದೆ ತಪ್ಪು ಹೊರಸಿ ಕೊಂಡಾಡಿದಯ್ಯ ಒಪ್ಪು ನಿಮಗಿದು ಕಪಟನಾಟಕ ಶ್ರೀ ಕೃಷ್ಣನೆ 3
ಎನ್ನ ಹೃದಯದೊಳಗಿದ್ದು ಭಿನ್ನಭೇದ ಮಾಡಿದೈಯ್ಯ ಇನ್ನಾರ ಮುಂದುಸುರಲಾಗದೊ ಶ್ರೀ ಕಾಂತನೆ 4
ಹೆಜ್ಜೆವಿಡಿದು ಬಂದ ನಿಜ ದಾಸ ಮಹಿಪತಿಗಿನ್ನು ಸಜ್ಜನರಿಗೀವ ಪದವ ಕೊಟ್ಟು ಕಾಯೊ ಕರುಣನೆ 5
***
No comments:
Post a Comment