ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದುಸರಲಿ ನಾ ನೆರೆ ಸಂತರಾ | ಸ್ವಾನುಭವಗಳನುವಾಗೀ ಮಾನಿಸಿರೋಳುಸಲೆ ಮಾನಿಸ ಸ್ಥಿತಿಯಲಿ ತಾನಿಹ ಉನ್ಮನಿಯಾಗಿ ಪ
ಕಾಮವು ಹರಿಪದ ತಾಮರಸವ ನಿ | ಷ್ಕಾಮದ ಭಕುತಿಗಳಲ್ಲಿ | ಆ ಮಹಾ ಕೋಪವು ಈ ಮನಸಿನ ಗುಣ | ನೇಮಿಸಿ ಶೀಕ್ಷಿಸುವಲ್ಲಿ | ಆ ಮೋಹ ಲೋಭವು ಯಾಮವಳಿಯದಾ | ನಾಮ ಕೀರ್ತನೆಯಲ್ಲಿ | ತಾ ಮರೆಯದ ಅತಿ ವ್ಯಾಮೋಹ ತನ್ನಯ | ಪ್ರೇಮದ ಕಿಂಕರರಲ್ಲಿ 1
ಮದವತಿ ಇಂದ್ರಾದಿ ಪದಗಳ ಸಿದ್ದಿಗೆ | ಳಿದಿರಡೆ ಕಣ್ಣೆತ್ತೆ ಲೆಕ್ಕಿಸರು | ವದಗಿಹ ಮತ್ಸರ ಕುದಿವಹಂಕಾರದ | ಮೊದಲಿಗೆ ತಲೆಯತ್ತಿಸಗುಡರು | ಇದರೊಳು ಸುಖದು:ಖ ಉದಿಸಲು ಹರಿಯಾ | ಜ್ಞದೆಗತಿಗಡ ಸಮಗಂಡಿಹರು | ಉದಕದಲಿ ಕಮಲದ ಎಲೆಯಂದದಿ | ಚದುರತೆಯಿಂದಲಿ ವರ್ತಿಪರು 2
ಜಲದೊಳು ಕಬ್ಬಿಣಸಲೆ ಮುದ್ದಿಯ ನೆರೆ | ನಿಲಿಸದೆ ನಿಲ್ಲದೆ ಮುಣಗುವದು | ಪರಿ | ನಳನಳಿಸುತ ತೇಲುತಲಿಹುದು | ಕಳೆವರ ವೃತ್ತಿಯ ಕಳೆ ಸುವೃತ್ತಿಯ ಮಾಡಿ | ಬೆಳಗಿನ ಘನದೊಳು ಮನ ಬೆರೆದು | ನಲವರು ಮಹಿಪತಿ ವಲುಮೆಯ ಪಡೆಯದ | ಹುಲು ಮನುಜರಿಗಿದು ಭೇದಿಸದು 3
***
No comments:
Post a Comment