Wednesday, 1 September 2021

ಕಾಯಯ್ಯ ಕಂಜಲೋಚನ ದಯಲೆನ್ನ ಕರುಣಾ ದಯಲೆನ್ನ ankita mahipati

ರಾಗ - : ತಾಳ -


ಕಾಯಯ್ಯ ಕಂಜಲೋಚನ

ದಯಲೆನ್ನ ಕರುಣಾ ದಯಲೆನ್ನ ll ಧ್ರುವ ll


ಅಕ್ಷಯಾನಂದ ನೀ ಪೂರ್ಣ ಲಕ್ಷುಮೀ ರಮಣ ಸಗುಣಾ

ಲಕ್ಷ್ಮೀರಮಣ ಪಕ್ಷಪಾಂಡವರ ಪ್ರಾಣ ರಕ್ಷಿಸೊ ನಾರಾಯಣ ll 1 ll


ಅಣುರೇಣು ವೊಳನುಕೂಲ ಮುನಿಜನಪಾಲ ಲೋಲಾ

ಘನಸುಖದ ಕಲ್ಲೋಳ ನೀನೆ ದೀನದಯಾಳಾ ll 2 ll


ಶರಣು ಜನರುದ್ಧರಣ ಜ್ಞಾನಗುರು ನಿಧಾನಾ ಗುರು ನಿಧಾನಾ 

ಕರುಣಾಸಾಗರ ಪೂರ್ಣ ಹೊರಿಯೊ ಮಹಿಪತಿಪ್ರಾಣ ll 3 ll

***

ಕಾಯಯ್ಯ ಕಂಜಲೋಚನ ದಯಲೆನ್ನ ಕರುಣಾ ದಯಲೆನ್ನ ಪ 


ಅಕ್ಷಯಾನಂದ ನೀ ಪೂರ್ಣ ಲಕ್ಷುಮೀ ರಮಣ ಸಗುಣಾ ಲಕ್ಷ್ಮೀರಮಣ ಪಕ್ಷಪಾಂಡವರ ಪ್ರಾಣ ರಕ್ಷಿಸೊ ನಾರಾಯಣ 1 

ಅಣುರೇಣು ವೊಳನುಕೂಲ ಮುನಿಜನಪಾಲ ಲೋಲಾ ಘನಸುಖದ ಕಲ್ಲೋಳ ನೀನೆ ದೀನದಯಾಳಾ 2 

ಕರುಣಾಸಾಗರ ಪೂರ್ಣ ಹೊರಿಯೊ ಮಹಿಪತಿಪ್ರಾಣ 3

***


No comments:

Post a Comment