ankita ಶ್ರೀಕಾಂತ / ಲಕುಮೀಕಾಂತ
ರಾಗ: ಕಲ್ಯಾಣಿ ತಾಳ: ಆದಿ
ಗುರುರಾಯರ ನಂಬಿರೊ ಶ್ರೀ ರಾಘವೇಂದ್ರ ಗುರುರಾಯರ ಪ
ವರಮಂತ್ರಾಲಯದಲ್ಲಿ ನಿರುತ ಸೇವೆಯಗೊಂಬ ಅ.ಪ
ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ
ದಾಶರಥಿಯ ಭಕ್ತ ದೇಶಿಕವರ್ಯರ 1
ಸಂತಾನಸೌಭಾಗ್ಯ ಚಿಂತಿತಾರ್ಥವನೀವ
ಕಂತುಪಿತನ ಪಾದ ಸ್ವಾಂತದಿ ಭಜಿಸುವ 2
ಅe್ಞÁನ ತಿಮಿರಕ್ಕೆ ಸುe್ಞÁನಪರಿಪೂರ್ಣ
ಪ್ರಾಜ್ಞರ ಗುರುವ್ಯಾಸರಾe್ಞÁಧಾರಕರಾದ 3
ಸ್ಮರಣೆಮಾತ್ರದಿ ಸಕಲ ದುರಿತ ಪರಿಹರಿಸುವ
ನರಹರಿ ಚರಣಾಬ್ಜ ವರ ಭೃಂಗರೆನಿಸುವ 4
ಭೂತ ಬೇತಾಳದ ಭೀತಿಯ ಬಿಡಿಸುವ
ಪೂತಾತ್ಮ ವಿಖ್ಯಾತ ಶ್ರೀಕಾಂತ ಸುಪ್ರೀತಾ 5
***
No comments:
Post a Comment