Monday 6 September 2021

ಬಂದೀಗ ಎನ್ನ ರಕ್ಷಿಸೋ ಶ್ರೀ ರಾಘವೇಂದ್ರ ankita lakumeesha

 ankita ಲಕುಮೀಶ 

ರಾಗ: [ನಾಗಸ್ವರಾವಳಿ] ತಾಳ: [ಆದಿ] 


ಬಂದೀಗ ಎನ್ನ ರಕ್ಷಿಸೋ ಶ್ರೀ ರಾಘವೇಂದ್ರ 


ಬಂದೀಗ ರಕ್ಷಿಸು ಕುಂದೆಂದು ಎಣಿಸದೆ

ವೃಂದಾಮಯದ ಬಾಧೆಯಿಂದ ಬೆಂದೆನು ತಂದೆ  ಅ ಪ


ಹಿಂದಾದ ಅವತಾರದಿ ನಿನಗೆ ಬಾಧೆ ತಂದೆ ಕೊಡಲು ಮುದದೀ

ಸುಂದರಕಂದನಾದ ಪ್ರಹ್ಲಾದರಾಜನೆನಿಸಿ

ಸಂದೋಹ ಬಾಧೆಗಳಿಂದ ದೂರಾದೆ

ಅಂದು ನಿನ್ನ ಕಿರಿ ತಂದೆಯ ಕೊಂದ

ಹಂದಿಯರೂಪದ ಹರಿಯ ತೋರಿಸೆನೆ

ಮಂದದೈತ್ಯನಿಗೆ ತೋರಿದೆ ಸ್ತಂಭದಿ

ಬಂದನು ನರಹರಿ ಕೊಂದನು ತಂದೆಯ  1

ಬ್ರಹ್ಮಣ್ಯತೀರ್ಥ ಕುವರಾ ಶ್ರೀ ವ್ಯಾಸರಾಜ ಬ್ರಹ್ಮಜಾಂಶಗೆ ಗುರುವರಾ

ಸನ್ಮೌನಿ ಮಧ್ವರೊಲಿಸಿ ಸದ್ಗ್ರಂಥ ನ್ಯಾಯಾಮೃತ 

ಸನ್ಮುದ ಸುರಿಸುವ ಚಂದ್ರಿಕೆ ತರ್ಕತಾಂಡವ

ಸನ್ಮನದಲಿ ನೀ ರಚಿಸಿ ಸುಜನಗಿತ್ತೆ

ಮನ್ಮಥಪಿತನಂಘ್ರಿ ಸಂತತ ಪೂಜಿಸಿ

ದುರ್ಮತ ದುರ್ವಾದಿ ತತಿಗಳ ಜಯಿಸಿ

ಬ್ರಹ್ಮನಪಿತ ಸರ್ವೇಶನೆಂದ ಗುರು  2

ಮಂದನ ಮೊರೆ ಕೇಳದೆ ಶ್ರೀ ಪರಿಮಳಾರ್ಯ ವೃಂದಾವನವ ಸೇರಿದೆ

ಎಂದೆಂದು ನಿನ್ನ ಪದ ದ್ವಂದ್ವವ ಬಿಡೆನಯ್ಯ

ಮಂದಾರ ಸುರತರುವೆಂದೂ ನಂಬಿದೆ ಗುರುವೆ

ಅಂದಸುನೀಗಿದ ಕಂದನ ಉಳುಹಿದೆ

ಬೆಂದ ಪ್ರಸೂತಿಯ ಬಿಸಿಲಿಂದ ಕಾಯ್ದವ

ವಂದಿಪೆ ದಶರಥ ನಂದನ ಲಕುಮೀಶ

ಮಂದಜಾಂಘ್ರಿ ಭೃಂಗ ಓಡ್ಯೋಡಿ ತ್ವರಿತ  3

***


No comments:

Post a Comment