Wednesday, 1 September 2021

ಎಂಥ ಧನ್ಯನೋ ಗುರುವಿನ್ನೆಂಥ ಮಾನ್ಯನೋ ankita krishnavittala

 ರಾಗ: ಕೇದಾರಗೌಳ ತಾಳ: ರೂಪಕ

ಎಂಥ ಧನ್ಯನೋ ಗುರುವಿನ್ನೆಂಥ ಮಾನ್ಯನೋ


ಕಂತುಪಿತನ ನಾಮಸ್ಮರಣೆ ಸಂತತವು ಮಾಡುತಿರುವ ಅ.ಪ


ಭಕ್ತಿಯಿಂದ ಸೇವೆಗೈವ ಭಕ್ತರಘವ ನೀಗಿ ಪೊರೆವ

ಭಕ್ತಬಂಧುವೆನಿಸಿ ಮೆರೆವ ಮುಕ್ತಿಮಾರ್ಗ ಸತತ ತೋರ್ವ 1

ತುಂಗತಟದಿ ಬಂದು ನೆಲಸಿ ರಂಗನಾಥನ ಪಾದಸ್ಮರಿಸಿ

ಭಂಗಗಳನು ನೀಗಿ ಪೊರೆವ ಮಂಗಳಾಂಗ ರಾಘವೇಂದ್ರ 2

ಕಮಲಬಾಂಧವನಂತೆ ಶೋಭಿಸಿ ವಿಮಲಕೀರ್ತಿಯಿಂದ ಮೆರೆವ

ಕಮಲನಾಭನ ಧ್ಯಾನ ಮಾಳ್ಪ ನಿರ್ಮಲಾಂಗ ರಾಘವೇಂದ್ರ 3

ಕರ್ಮಶೀಲನಾಗಿ ಸತತ ಧರ್ಮಮಾರ್ಗವನ್ನು ಸಾರಿ

ಕರ್ಮದೋಷಗಳನು ಹರಿವ ನಿರ್ಮಲಾಂಗ ರಾಘವೇಂದ್ರ 4

ಕಾಮಿತಾರ್ಥವಿತ್ತು ಕಾಯ್ವ ಶ್ಯಾಮಲಾಂಗ ಕೃಷ್ಣವಿಠಲ-

ಸ್ವಾಮಿಯನ್ನು ಪೂಜಿಸುವ ಪ್ರೇಮಮಯನೆ ರಾಘವೇಂದ್ರ 5

***


No comments:

Post a Comment