ರಾಗ: ಕಾಪಿ ತಾಳ: ಆದಿ
ಮಂಡೆ ಬಾಗುವೆ ನಾ ರಾಘವೇಂದ್ರ ಗುರುವೆ ಪ
ಪಂಢರಿನಾಥನ ಭಕ್ತ ವರಗುರುವೆ ಅ. ಪ
ಶಂಡಾಮರ್ಕರುಪದೇಶ ನೀ ಕೇಳಲಿಲ್ಲೆಂದು
ಚಂಡಕೋಪದಿ ಅಂದು ನಿನ್ನ ತಂದೆ
ಮಂಡೆಒಡೆಯುವೆನೆಂದೆದ್ದುನಿಲ್ಲೆ
ಪುಂಡರೀಕಾಕ್ಷನ ಕಂಬದಿತೋರಿದ ಗುರುವೆ 1
ತುಂಗಾತೀರದಿ ಹಂಪೆಯಲ್ಲಿದ್ದ ಗುರುವೆ
ಅಂಗಜಜನಕನ ಸೇವಿಸಿ ಯತಿ ಮೆರೆದೆ
ರಂಗನಂಕಿತ ಭಕ್ತರಿಗಿತ್ತು ದಾಸರಮಾಡುತ
ಭಂಗಬಿಡಿಸಿ ರಾಜನಕಾಯ್ದ ಗುರುವೆ 2
ಅಂಧ ಮೂಕ ಬದಿರರೀಪ್ಸಿತಗಳಸಲಿಸಿ
ಛಂದಛಂದದ ವಾರ್ತೆಗಳನೇಕ ನಡೆಸಿ
ಬಂದ ಭಾಗವತರ ಭಕ್ತಿಸ್ತುತಿ ಆಲಿಸಿ
ಅಂದದಲಿರುವೆ ಶ್ರೀಕೃಷ್ಣವೇದವ್ಯಾಸವಿಠಲನಿಗದನರ್ಪಿಸಿ 3
****
No comments:
Post a Comment