ankita janakiramana
ರಾಗ: ಪೂರ್ವಿಕಲ್ಯಾಣಿ ತಾಳ: ಆದಿ
ಜನ್ಮವೇತಕೆ ಗುರುಗಳ ನೋಡದ ಜನ್ಮವೇತಕೆ ಪ
ಜನ್ಮವೆಲ್ಲ ಭೂಭಾರವೇ ಮನುಜ ಅ. ಪ
ಉದಯಕಾಲದಲ್ಲಿ ತುಂಗಭದ್ರೆಯಲ್ಲಿ
ಮೋದದಿಂದ ಮಿಂದುಬಂದ ಭಕುತರ
ಕುಂದುಗಳಕಳೆದು ಅಧಿಕ ಹರುಷದಿಂದ
ವೃಂದಾವನದಿಮೆರೆವ ಗುರುಗಳ ನೋಡದ 1
ಕಾಲಕಾಲದಲ್ಲಿ ಮೂಲರಾಮರಲ್ಲಿ
ಕುಳಿತು ಸೇವೆಗೈವ ಚೆಲುವಮೂರ್ತಿಯತಿಯ
ಆಲಯದಿ ಹೊಕ್ಕು ಕಳೆದು ಪಾಪಗಳ
ಇಳೆಯೊಳು ಸುಖದಿ ಬಾಳಲಾರದಿರುವ 2
ಜಾನಕಿರಮಣನ ಧ್ಯಾನವಮಾಡುತ
ದೀನಭಕುತರ ಮಾನದಿಂದ ಕಾಯ್ವ
ಘನಮಹಿಮರಾದ ಮುನಿವರರ ತನ್ನ
ಅಂತರಂಗದಲ್ಲಿ ಕಾಣದ ಮನುಜ 3
***
No comments:
Post a Comment