Wednesday, 1 September 2021

ಶ್ರೀವಿಷ್ಣು ಸರ್ವೋತ್ತಮ ಜೀವ ಜಡಾತ್ಮಕ ankita jagannatha vittala ತಾರತಮ್ಯ ನಮಸ್ಕಾರ ಸ್ತೋತ್ರ

 ತಾರತಮ್ಯ  ನಮಸ್ಕಾರ ಸ್ತೋತ್ರ ||

ಅಂಕಿತ  ಶ್ರೀ ಜಗನ್ನಾಥ ವಿಠಲ ||

॥1॥ ಶ್ರೀವಿಷ್ಣು ಸರ್ವೋತ್ತಮ ಜೀವ ಜಡಾತ್ಮಕ ಜಗದತ್ಯಂತಭಿನ್ನ |

ಸಚ್ಚಿದಾನಂದ ಸ್ವರೂಪಾ ಮುಕ್ತಾಮುಕ್ತ ಸುರಗಣ ಸೇವಿತನಾದ |

ಲಕ್ಷ್ಮೀನಾರಾಯಣಗೆ ಅನಂತಾನಂತ ನಮಸ್ಕಾರಾ ॥1॥ 

॥2॥ ಆತನ ಪತ್ನಿ ಜ್ಞಾನಾನಂದ ಸ್ವರೂಪಳಾದ  ಅನಂತಾನಂತ ಗುಣದಿಂದ |

ನೀಚಳಾದ ಮಹಾಲಕ್ಷ್ಮೀ ದೇವೇರಿಗೆ  ಅನಂತಾನಂತ ನಮಸ್ಕಾರಾ ॥2॥ 

॥3॥ ಮಹಾಲಕ್ಷ್ಮೀ ಪುತ್ರರಾದ  ಜದ್ಗುರುಗಳಾದ  ಬ್ರಹ್ಮ ವಾಯುಗಳಿಗೆ ಅನಂತಾನಂತ ನಮಸ್ಕಾರಾ ॥3॥ 

॥4॥ ವೇದಾಭಿಮಾನಿಗಳಾದ  ಬ್ರ ಹ್ಮ ವಾಯುಗಳಿಗೆ  ಸ್ತ್ರೀಯರಾದ  ಸರಸ್ವತೀ ಭಾರತೇರಿಗೆ ಅನಂತಾನಂತ ನಮಸ್ಕಾರಾ ॥4॥ 

॥5॥ ಬ್ರಹ್ಮವಾಯುಗಳಿಗೆ  ಮಕ್ಕಳಾದ ಗರುಡ ಶೇಷ ರುದ್ರರಿಗೆ  ಅನಂತಾನಂತ ನಮಸ್ಕಾರಾ ॥5॥ 

॥6॥ ಶ್ರೀ ಕೃಷ್ಣಪತ್ನೇರಾದ ಜಾಂಬವತೀ ಕಾಳಿಂದೀ ಭದ್ರಾ  ನೀಲಾ |

ಮಿತ್ರವಿಂದಾ  ಲಕ್ಷಣಾ ಈ ಆರುಮಂದಿಗೆ  ಅನಂತಾನಂತ ನಮಸ್ಕಾರಾ ॥6॥ 

॥7॥ ಗರುಡ ಶೇಷ ರುದ್ರರಿಗೆ  ಹೆಂಡರಾದ ಸೌಪರ್ಣೀ  ವಾರುಣೀ  ಪಾರ್ವತೇರಿಗೆ ಅನಂತಾನಂತ ನಮಸ್ಕಾರಾ ॥7॥ 

॥8॥ ಸ್ವರ್ಗಾಧಿಪತಿಯಾದಂತಾ  ದೇವೇಂದ್ರಗೆ  ಕಾಮರಿಗೆ ಅನಂತಾನಂತ ನಮಸ್ಕಾರಾ ॥8॥ 

॥9॥ ಇಂದ್ರಪತ್ನೀ  ಶಚೀದೇವಿಗೆ  ಕಾಮಪತ್ನೀ ರತೀದೇವಿಗೆ |

ಸ್ವಾಯಂಭುವ ಮನುವಿಗೆ ಬೃಹಸ್ಪತ್ಯಾಚಾರ್ಯರಿಗೆ  ಕಾಮ ಪುತ್ರ ಅನಿರುದ್ಧಗೆ ದಕ್ಷಪ್ರಜೇಶ್ವರಿಗೆ ಈ ಆರು ಮಂದಿಗೆ ಅನಂತಾನಂತ ನಮಸ್ಕಾರಗಳು ॥9॥ 

॥10॥ ಕೋಣಾಧಿಪತಿಯಾದ  ಪ್ರವಹ ವಾಯುದೇವರಿಗೆ  ಅನಂತಾನಂತನಮಸ್ಕಾರಗಳು ॥10॥ 

॥11॥ ದೇವರ ಕಣ್ಣುಗಳಿಂದ ಹುಟ್ಟಿದಂಥಾ ಸೂರ್ಯದೇವರಿಗೆ   ಮನಸ್ಸಿನಿಂದ ಹುಟ್ಟಿದಂಥ  ಚಂದ್ರದೇವರಿಗೆ  ಸ್ತನಗಳಿಂದಾ ಹುಟ್ಟಿದಂಥಾ ಧರ್ಮರಾಯಗೆ |

ಸ್ವಾಯಂಭುವ ಪತ್ನಿ ಶತರೂಪಾದೇವಿಗೆ ಅನಂತಾನಂತ ನಮಸ್ಕಾರಗಳು ॥11॥ 

॥12॥ ದೇವರ ಕುಕ್ಷಿಯಿಂದ ಹುಟ್ಟಿದಂಥಾ ಉದಕಾಭಿಮಾನಿಯಾದ ಸಮುದ್ರನಾಥಗೆ ಅನಂತಾನಂತ ನಮಸ್ಕಾರಗಳು ॥12॥ 

॥13॥ ಬ್ರಹ್ಮದೇವರ ಅಂಕೋದ್ಭವರಾದ ದೇವಋಷ್ಯೋತ್ತಮರಾದ  ನಾರದರಿಗೆ ಅನಂತಾನಂತ ನಮಸ್ಕಾರಗಳು ॥13॥ 

॥14॥ ಹರಿಸರ್ವೋತ್ತಮತ್ವ  ಸ್ಥಾಪಿಸಿದಂಥಾ  ಭೃಗುಮುನಿಗೆ  ದೇವ ಮುಖನಾದ |

ಅಗ್ನಿ ದೇವರಿಗೆ  ದಕ್ಷಪತ್ನೀ  ಪ್ರಸೂತೀ ದೇವಿಗೆ ಅನಂತಾನಂತ ನಮಸ್ಕಾರಾ ॥14॥ 

॥15॥ ಗಾಧಿಯ ಮಗನಾದ ವಿಶ್ವಾಮಿತ್ರಗೆ  ಬ್ರಹ್ಮಪುತ್ರರಾದ  ಮರೀಚಿ  ಅತ್ರಿ  ಅಂಗೀರಸ  ಪುಲಸ್ತ್ಯ ಪುಲಹ ಕ್ರತು ವಶಿಷ್ಟ ಋಷಿಗಳಿಗೆ  ವೈವಸ್ವತ ಮನುವಿಗೆ ಅನಂತಾನಂತ ನಮಸ್ಕಾರಾ ॥15॥

॥16॥ಮಿತ್ರನಾಮಕ ಸೂರ್ಯಗೆ ಗುರುಪತ್ನಿ  ತಾರಾದೇವಿಗೆ |

ಕೋಣಾಧಿಪತಿ  ನಿಋಋತಿಗೆ  ಪ್ರವಹಪತ್ನಿ ಪ್ರಾವಹೀದೇವಿಗೆ ಅನಂತಾನಂತ ನಮಸ್ಕಾರಾ ॥16॥ 

॥17॥ದೇವತಾ ಸೇನಾಧಿಪತಿ ವಿಷ್ವಕ್ಸೇನಗೆ  ಅಶ್ವನೀ ದೇವತೆಗಳಿಗೆ |

ಗಣಪ  ಧನೇಶ್ವರನಾದ  ಕುಬೇರಗೆ  ಅನಂತಾನಂತ ನಮಸ್ಕಾರಾ ॥17॥ 

॥18॥ ಶೇಷಶತಸ್ಥರಾದ ಏಕಾದಶ ಮನುಗಳಿಗೆ  ಚ್ಯವನ ಪುತ್ರಗೆ |

ಉಚಥ್ಯ ಋಷಿಗಳಿಗೆ  ಶುಕ್ರಾಚಾರ್ಯರಿಗೆ ಅನಂತಾನಂತ ನಮಸ್ಕಾರಾ ॥8॥ 

॥19॥ ಕಾರ್ತವೀರ್ಯ ಶಶಬಿಂದು ಮಾಂಧಾತ  ಪ್ರಿಯವ್ರತ  ಪರೀಕ್ಷಿತ |

ಅಂಬರೀಷಾದಿ ಕರ್ಮಜ ದೇವತೆಗಳಿಗೆ  ಅನಂತಾನಂತ ನಮಸ್ಕಾರಾ ॥19॥ 

॥20॥ ಭಾಗೀರಥಿಗೆ ಮೇಘಾಭಿಮಾನಿ  ಪರ್ಜನ್ಯಗೆ  ಸೂರ್ಯಪತ್ನೀ  ಸಂಜ್ಞಾದೇವಿಗೆ |

ಶಶಿ ಪತ್ನಿ  ರೋಹಿಣಿಗೆ  ಯಮಪತ್ನಿ  ಶ್ಯಾಮಲಾ  ಅನಿರುದ್ಧಪತ್ನಿ  ವಿರಾಟದೇವಿಗೆ ಅನಂತಾನಂತ ನಮಸ್ಕಾರ ॥20॥

॥21॥ತರುವಾಯ ಅನಖ್ಯಾತ ದೇವತೆಗಳಿಗೆ ಅನಂತಾನಂತ ನಮಸ್ಕಾರಾ ॥21॥ 

॥22॥ ಶತೋನಶತಕೋಟಿ ಋಷಿಗಳಿಗೆ ತಥಾ |

ಅಗ್ನಿಜಾಯಾ  ಸ್ವಾಹಾದೇವಿಗೆ ಅನಂತಾನಂತ ನಮಸ್ಕಾರಾ ॥22॥

॥23॥ಜಲಾವಾಂತರಾಭಿಮಾನಿ  ಬುಧಗೆ ಅನಂತಾನಂತ ನಮಸ್ಕಾರಾ ॥23॥

॥24॥ ನಾಮಾಭಿ ಮಾನಿ ಉಷಾದೇವಿಗೆ ಅನಂತಾನಂತ ನಮಸ್ಕಾರಾ ॥24॥ 

॥25॥ ಭೂಮ್ಯಾಭಿಮಾನಿ  ಶನೈಶ್ಚರಗೆ ಅನಂತಾನಂತ ನಮಸ್ಕಾರಾ ॥25॥

॥26॥ ಕರ್ಮಾಭಿಮಾನಿ  ಪುಷ್ಕರಗೆ ಅನಂತಾನಂತ ನಮಸ್ಕಾರಾ ॥26॥ 

     ( ಇಲ್ಲಿ ಪರ್ಯಂತ ತತ್ವಾಭಿಮಾನಿಗಳು ) 

ತರುವಾಯ ತಥಾ ||

ಅಜಾನ ದೇವತೆಗಳಿಗೆ  -- ತುಂಬುರು ಮೊದಲಾದ  ನೂರು ಗಂಧರ್ವರಿಗೆ |

ಉರ್ವಶೀ  ಮೊದಲಾದ  ನೂರು  ಅಪ್ಸರಃ  ಸ್ತ್ರೀಯರಿಗೆ  ಎಂಭತ್ತು ಋಷಿಗಳಿಗೆ |

ನಲ್ವತ್ತೇಳು  ಅಗ್ನಿ ಪುತ್ರರಿಗೆ -- ಹದಿನಾರು ಸಹಸ್ರ  ಕೃಷ್ಣ ಪತ್ನೇರಿಗೆ |

ಕೃಷ್ಣಾಂಗಸಂಗಿಗಳಾದ  ಗೋಪಿಕಾ ಸ್ತ್ರೀಯರಿಗೆ   -- ತಥಾ ಚಿರಪಿತೃಗಳಿಗೆ |

ತಥಾ ದೇವ ಗಂಧರ್ವರಿಗೆ  -- ತರುವಾಯ  ಮನುಷ್ಯ ಗಂಧರ್ವರಿಗೆ |

ತರುವಾಯ  ಕ್ಷಿತಿಪರಿಗೆ -- ತರುವಾಯ  ಮನುಷ್ಯೋತ್ತಮರಿಗೆ  --

ತರುವಾಯ  ಮನುಷ್ಯೋತ್ತಮರಲ್ಲಿ ಮಧ್ಯಮರಿಗೆ  --- 

ಮನುಷ್ಯೋತ್ತಮರಲ್ಲಿ  ಅಧಮರಿಗೆ  --- 

ತಥಾ ಮನುಷ್ಯ ಮಧ್ಯಮೋತ್ತಮರಿಗೆ  ಅನಂತಾನಂತ ನಮಸ್ಕಾರಗಳು ||

ಅಸ್ಮದ್ಗುರುವಂತರ್ಯಾಮಿ   --  ಪರಮಗುರುಗಳಂತರ್ಯಾಮಿ |

ತತ್ವದೇವತೆಗಳಂತರ್ಯಾಮಿ -- ಉಮಾ ಮಹೇಶ್ವರಂತರ್ಯಾಮಿ  --- ಶ್ರೀ ಮದ್ಧನು ಮದ್ಭೀಮ  ಮಧ್ವಾ ತ್ಮಕ  ಭಾರತೀರಮಣ   |

ಮುಖ್ಯಪ್ರಾಣಾಂತರ್ಯಾಮಿ  |

ಶ್ರೀ ಭೂ ದುರ್ಗಾ ರಮಣ  ರಾಮಕೃಷ್ಣ  ವೇದವ್ಯಾಸಾದಿ  ಅನಂತ ರೂಪಾತ್ಮಕ |

ಸಚ್ಚಿದಾನಂದಾತ್ಮಕ  ಜಗನ್ನಾಥ ವಿಠಲಾತ್ಮಕ ||

ಶ್ರೀ ತಾರತಮ್ಯ  ನಮಸ್ಕಾರ ಸ್ತೋತ್ರಮ್  ಸಂಪೂರ್ಣಮ್ ||

ಶ್ರೀ ಕೃಷ್ಣಾರ್ಪಣ ಮಸ್ತು || 

No comments:

Post a Comment