..
ಬಹುದೂರ ಮುಕ್ತಿಪಥದಿ ನಡೆದು ನೀವುಹೋಗಲದನಳವಡಿಸಿಕೊಳ್ಳಿರೊ ಪ.
ಸಂಸಾರವೆಂಬಡವಿಯ ಸುತ್ತ ಸುಳಿವಸಂಕಟವ ಕಳೆವರೆಕಂಸಾರಿ ತ್ರಿವಿಕ್ರಮನಿಗೆ ಸೇವೆಯಅಂಶುಪ್ರದಕ್ಷಿಣವ ಮಾಡಿರೊ 1
ಏಕಂ ವಿನಾಯಕೇ ಕುರ್ಯಾದ್ವೇ ಸೂರ್ಯೇನತ್ರೀಣೆ ಶಂಕರೆಚತ್ವಾರಿ ಕೇಶವೇ ಕುರ್ಯಾತ್ ಸಪ್ತಶ್ವತ್ಥಪ್ರದಕ್ಷಿಣವ ಮಾಡಿರೊ 2
ಬ್ರಹ್ಮತ್ಯವೆಂಬ ಪಾಪವ ಕಳೆವರೆಬ್ರಹ್ಮಪಿತನ ಪಟ್ಟದರಸಿಗೆಒಮ್ಮನದಲೊಮ್ಮೆ ಪ್ರದಕ್ಷಿಣವಮಾಡಿನಿರ್ಮಲ ಸುಖವ ಪಡೆಯಿರೊ3
ತೀರ್ಥಯಾತ್ರೆಗಳು ಬೇಡ ನೀವು ಗಳಿಸಿದರ್ಥವ್ಯರ್ಥವ ಕೆಡಿಸಬೇಡಚಿತ್ತದಲ್ಲಿ ಹರಿಯ ಚರಣವನು ಕೂಡಿಸತ್ಸುಖವನುಂಬುದು ಕಾಣಿರೊ4
ಅಸ್ವಸ್ಥರಾದ ಜನರು ಬಿಡದೆ ನಮ್ಮ-ಶ್ವತ್ಥ ನಾರಾಯಣನಿಗೆದಾಸ್ಯಮಂ ಪಡೆದು ಭಕ್ತಿಯಿಂತುತತ್ಸುಖವನುಂಬುದು ಕಾಣಿರೊ 5
ಇಂತು ಪ್ರದಕ್ಷಿಣವ ಮಾಡಿ ಲಕ್ಷ್ಮೀಕಾಂತನ ಕೃಪೆಯ ಪಡೆವರೆಚಿಂತೆಗಳ ಕಳೆದಮೇಲೆ ಮುಕ್ತಿಯಲಿಸಂತೋಷದಲಿ ಸುಖಿಪರು6
ಹಯವದನನೆಂಬ ಗುರುಕೊಟ್ಟಮಂತ್ರದಿಭಯವೆಂಬ ಭುಜಂಗನ ಜಯಿಸಿ ಮೂರು ಬಾರಿ ಸುತ್ತಿ ಹÀರಿಯ ಪದದಣಿಯ ಕಟ್ಟಿ ನಡೆಯಿರೊ 7
***
No comments:
Post a Comment