Wednesday 1 September 2021

ಎನ್ನನುದ್ಧರಿಸಲಾಗದೆ ಚೆನ್ನರಾಯ ಬಿನ್ನೈಸುವೆ ಇನ್ನು ಬೇರೆ ಗತಿಯ ಕಾಣೆ ankita hayavadana

 ..

ಎನ್ನನುದ್ಧರಿಸಲಾಗದೆ ಚೆನ್ನರಾಯ ಪ.


ಎನ್ನನುದ್ಧರಿಸಲಾಗದೆ ಚೆನ್ನರಾಯ ಬಿನ್ನೈಸುವೆ ಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣಕಮಲದಾಣೆ ಅ.ಪ.


ಶರಣಜನರ ಪಾಲ ಕಲ್ಪತರು ಗುರುಸ್ವರೂಪನೆಂದುಧರೆಯೊಳಖಿಳ ನಿಗಮ ಉಸುರುತಿರಲು ನಿನ್ನಚರಣವನ್ನು ಶಿರದೊಳಾಂತೆ ಎನ್ನ ಮೇಲಣಕರುಣವಿಲ್ಲದದೇನುಕಾರಣ ಸಲಹಬೇಕುಸುರರ ಮಸ್ತಕದ ಸುಭೂಷಣ 1


ಹಿಂದೆ ನಾನನಾಥನಾಗಿ ಒಂದೆರಡ[ಲ್ಲಾ]ನೇಕ ಜನ್ಮದಿಬಂದು ನರಕಯಾತನೆಯಲ್ಲಿ ನೊಂದು ಬೆಂದು ಬಾಯಬಿಡುತಬಂದೆ ನಿನ್ನ ಪೆಸರುಗೊಂಡೆನೊ ಸನಾಥನಾಗಿಮುಂದೆ ನಾಮಸುಧೆಯನುಂಡೆನೊ ನೀ ಕೃಪಾಳುಎಂದು ನುಡಿವರನ್ನು ಕಂಡೆನೊ 2


ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನಸಲಿಗೆಯೊಳೀ ಬಿನ್ನಪವನು ಸಲಿಸುತಿಹೆನು ಮುಂದಕಿನ್ನುಜಲುಮ ಬಾರದಂತೆ ವರವನು ಇತ್ತು ಎನ್ನಸಲಹೊ ದೊರೆಯೆ ನಿನ್ನ ಕರೆಯೆನೊ ಮುಂದೆ ಮುಕುತಿ-ಲಲನೆಯೊಡನೆ ಸುಖದಲಿರುವೆನು 3


ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊ-ಯಿಸಿ ತಿರುಗುತಿರÀಲು ಮೋಹಪಾಶವೆನ್ನ ಸುತ್ತಿಕೊಂಡುಘಾಸಿ ಮಾಡುತಿರಲು ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ ಸಲಹೊ ಸ-ರ್ವೇಶ ನಂಬಿದವನ ಕೆಡಿಸದೆ 4


ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದುಮನ್ನಿಸಿದರೆ ಲೋಕದೊಳಗೆ ಧನ್ಯನಹೆನು ಜನಮವೆತ್ತಿಉನ್ನತಾಹುದು ನಿನ್ನ ಕೀರುತಿ ನಾಶವಾಹುದುಎನ್ನ ಭವದ ಬಹಳ ಧಾವತಿ ಸಲಹೊಚೆನ್ನ ಹಯವದನಮೂರುತಿ 5

***


No comments:

Post a Comment