Wednesday, 1 December 2021

ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ankita hayavadana HARIYA PATTADA RAANI NIMMA SIRI CHARAKKE


ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆ ಧರಣಿ ಒರೆಸಮ್ಮ ದುರಿತಘಮ್ಮ ಹರಿಸುದಮ್ಮ ಪ.


ಧನಧಾನ್ಯವಿತ್ತು ಮತ್ರ್ಯರ ಪೊರೆವೆ ಎಂದೆಂದುಮನೆಗಿಂಬುಕೊಟ್ಟು ರಕ್ಷಿಸಿದೆದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದುನಿನ್ನ ಸಲಹುವ ಪ್ರವೀಣೆ1


ಸಪ್ತಸಮುದ್ರಗಳ ಪೊತ್ತಿಪ್ಪೆ ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆಉತ್ತಮ ತ್ರಿವಿಕ್ರಮನ ರಥೋತ್ಸವವೆ ಮೊದಲಾದಪವಿತ್ರಾಂಕುರಾರ್ಪಣಕೆ ನೀ ಬಂದು ವರಿಯಸುತ್ತಿನ ಪವಳಿಯೊಳಗೆ ನಿಂದು ನಮಗೆಮುಕ್ತಿ ಪದವೀವುದಕೆ ಬಾ ಕೃಪಾಸಿಂಧು 2


ನಿನಗೆ ದ್ರೋಹವ ಮಾಡಿದ ಹಿರಣ್ಯಾಕ್ಷನೆಂಬ ದುರ್ಜನದನುಜನ ವರಾಹನಾಗಿ ಮೊನೆಯದಾಡೆಯಕೊನೆಯಲಿಂದು ಕೊಂದು ನಿನ್ನ ಮನೋಹರತೊಡೆಯಲಿಟ್ಟು ಕೊಂಡ ಸಿರಿ ಹಯವದನಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿನಿನ್ನನ್ನು ಪೊರೆಯುತಲಿಹನು ಕಂಡಾ3

***


No comments:

Post a Comment