Wednesday, 1 September 2021

ಎದ್ದು ನಿಂತ ಬಂದು ನಿಂತ ಮುಂದೆ ನಿಂದಂಥಮಾರಾಂತರ್ಗೆ ಕೃತಾಂತ ankita hayavadana

..

ಎದ್ದುನಿಂತ ಬಂದು ನಿಂತ ಮುಂದೆ ನಿಂದಂಥಮಾರಾಂತರ್ಗೆ ಕೃತಾಂತ ನಿಶ್ಚಿಂತ ಹನುಮಂತಬಲವಂತ ಯೆದೆಗೊಂತ ತನಪಂಥ ಸಲಲೆನುತಸÀಂತರಿಗೆ ಸಂತತ ಶಾಂತ ನಿಂತ ಮಾರಾಂತ ಕೃತಾಂತ ಪ.


ದುರುಳ ರಾವಣನ ವನದ ತರುವಿನ ಕೊನೆಯೇರಿದಕರಚರಣಗಳ ಘಾಯದಿ ಮರಂಗಳ ಮುರಿದಅರಿಗಜ ಗಂಡಭೇರುಂಡನೆಂಬ ತನ್ನ ಬಲುಬಿರುದಮೆರೆದು ಮಾರುತಿ ಪ್ರತಿಭಟರ ಶಿರಂಗಳ ತರಿದ 1

ಸೀತೆಗೆ ಉಂಗುರವನ್ನಿತ್ತು ಮತ್ತೆ ಕೈಗಳ ಮುಗಿದಪ್ರೀತಿಯಿಂ ಪೊನ್ನಕಚ್ಚುಟಕ್ಕಿಟ್ಟ ಗಂಟನು ಬಿಗಿದಖ್ಯಾತ ಮಂಡೋದರಿಕುವರನ ಬಸುರನು ಬಗಿದವಾತಸುತನು ವೈರಿಪುರವ ಸುಡಲು ತೊಡಗಿದ 2

ನಲಿದು ಲಂಘಿಸಿ ನಳನಳಿಸುವ ಬಾಲವನೆತ್ತಿಖಳರೆದೆ ಶೂಲ ಹುಬ್ಬುಗಳ ಗಂಟಿಕ್ಕಿ ನೋಡುವ ಅರ್ಥಿಆಳುತಲಿಹ ಅಬಲೆಯರ ಭಯಂಕರಮೂರ್ತಿಸುಳಿದನು ಕೇರಿಕೇರಿಯಲಸುರರ ನುಗ್ಗೊತ್ತಿ 3

ಲಂಕಾನಗರಿಯ ಪುಚ್ಚದ ಕಿಚ್ಚಿಂದ ಸುಟ್ಟಹುಂಕರಿಸುತ ಅಹಿತರ ಬೇಗ ತೆಗೆದೊಗದಿಟ್ಟಕಂಕಣ ಮಕುಟ ಹಾರಂಗಳಿಂದೊಪ್ಪುವ ಬಲುದಿಟ್ಟಶಂಕೆಯಿಲ್ಲದನಿಲಜ ಶತ್ರುಗಳಿಗಿಂತರ್ಥಿಯ ಕೊಟ್ಟ 4

ಹೋಗೆಲೊ ಕಪಿಯೆನೆ ಹೊಕ್ಕು ರಕ್ಕಸರನು ಬಿಗಿದಕಾಗೆಯ ಬಳಗಕೆ ಕಲ್ಲನಿಟ್ಟಂದದಿ ಮಾಡಿದಆಗಲೆ ಕಂಡ ದಶಮುಖನೆಂಬ ಕಳ್ಳನ ನೋಡಿದಬೇಗ ಜಾನಕಿಯನ್ನು ಬಿಡು ಬಿಡುಯೆನಲು ತೊಡಗಿದ 5

ಮೂರರದೊಂದು ಪಾಲು ಖಳರ ಜನಂಗಳ ಕೊಂದಮೀರಿದ ಸೇನೆ ನಮ್ಮ ರಘುಪತಿಗಿರಲೆಂದು ನಿಂದನೂರುಯೋಜನದ ವಾರಾಶಿಯ ತೀರಕೆ ಬಂದಹಾರಿದನು ಗಗನಕೆ ಹನುಮನು ಭರವಸದಿಂದ ನಿಂದ 6

ಕುಂಭಿನೀ ಸುತೆಯ ಕುರುಹಿನ ಸನ್ಮಣಿಯ ತಕ್ಕೊಂಡಅಂಬುಧಿಯನು ಬೇಗ ದಾಟಿ ಶ್ರೀರಾಮರ ಕಂಡತ್ರ್ಯಂಬಕ ಮೊದಲಾದ ಸುರರ ತಂಡದಲಿ ಪ್ರಚಂಡಕಂಬುಕಂಧರ ಹಯವದನನ ಭಕ್ತಿರಸಾಯನ ಉಂಡ 7

***

 

No comments:

Post a Comment