..
ದಾನವಿಲ್ಲ ಧರ್ಮವಿಲ್ಲ ಜ್ಞಾನವಿಲ್ಲಏನು ಹೇಳಿದರೇನು ವಿಷಯಮೆಚ್ಚಿದವಗೆ ಪ.
ಕಂಡಕಂಡವರ ಅನ್ನಕೆ ಸಿಲುಕಿ ಅನುಗಾಲಭಂಡತನದಲಿ ಕಾಲವ ಕಳೆಯುತತಂಡ ತಂಡದಿ ಬಾಹ ಔತಣಕೆ ಮೈಯ್ಯುಬ್ಬಿಉಂಡು ಎನಗಿಂದಧಿಕ ಯೋಗ್ಯನಿಲ್ಲವೆಂದು 1
ಪರ್ವಕಾಲ ಪಿತೃದಿವ್ಸ ಗುರುಗÀಳ ಪುಣ್ಯದಿನಸರ್ವಕರ್ಮವ ತ್ಯಜಿಸಿ ಅತಿಥಿಗೀಯದೆಪರರ ಅನ್ನವ ಬಿಡದೆ ಉತ್ಸಾಹದಲಿ ಪೋಗಿನಲಿನಲಿದುಂಡು ಸ್ತೋತ್ರವ ಮಾಡಿ ದಿನಕಳೆವೆ 2
ಅನ್ಯರೊಡವೆಯು ತನಗೆ ಬಂದರೆ ಸಂತೋಷತನ್ನೊಡವೆ ಒಬ್ಬರಿಗೆ ಕೊಡಲು ಕ್ಲೇಶಉನ್ಮತ್ತನಾಗಿ ಉದರವ ಪೊರೆವ ಈ ದೋಷಮನ್ನಿಸಿ ದಯಮಾಡಿ ಸಲಹೋ ಹಯವದನ3
***
No comments:
Post a Comment