Wednesday, 1 September 2021

ಜಯ ದೇವ ಜಯದೇವ ಜಯ ಶಂಕರ ಮೂರ್ತಿ ಜಯ ಜಯವೆಂದು ಬೆಳಗುವೆ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಜಯದೇವ ಜಯದೇವ ಜಯ ಶಂಕರ ಮೂರ್ತಿ ಜಯ ಜಯವೆಂದು ಬೆಳಗುವೆ ಮನದಲಿ ಭಾವಾರ್ತಿ ಪ 


ಸಾಧನ ಕೆಂಜೆಡೆಯೊಳಗೆ ಜ್ಞಾನಗಂಗೆಯ ನಿಲಿಸಿ ಸಾದರದಲಿ ಚಿಜ್ಯೋತಿಯ ಚಂದ್ರನ ಕಳೆಧರಿಸಿ ನಾದಬಿಂದು ಕಳಾನಯನ ತ್ರಯವೆರಿಸಿ ಮೋದಿಪೆ ಅಪರೋಕ್ಷನುಭವ ಮುಖದೆಳೆ ನಗೆಬಳಿಸಿ 1 

ಧವಲಾಂಗದಿ ಸಲೆ ಶುದ್ಧ ಸತ್ವದ ಶೋಧಿಸಲಿ ತವಕದಿ ಶಮದಮವೆಂಬಾ ಬಾಹುದ್ವಯದಲಿ ಅವಯವದಲಿ ನಿಜಭಕ್ತಿ ಶೇಷಾಭರಣದಲಿ ಶಿವತಾನೆಂದು ಬೆಳಗುವೆ ಸಹಜಾನಂದದಲಿ 2 

ವಿವೇಕ ವೈರಾಗ್ಯದಾ ಕರಚರ್ಮಾಂಬರಣಾ ಅವನಿಲಿಸುರನರಪೂಜಿತ ಪಾವನಶ್ರೀ ಚರಣಾ ಕುವಲಯ ಲೋಚನ ಶಾಂತಿಯ ಪಾರ್ವತಿ ಸಹಕರುಣಾ ಭವತಾರಕ ಗುರುಮಹಿಪತಿ ಪ್ರಭುದೀನೋದ್ದಾರಣಾ 3

****

 

No comments:

Post a Comment