ಕಾಖಂಡಕಿ ಶ್ರೀ ಕೃಷ್ಣದಾಸರು
ರಘುರಾಯ ಯನ್ನಮನವ ನಿಲಿಸಲಾಗದೇ ನಿನ್ನ ಚರಣ ಕಮಲಲಿದ್ದು ತನ್ನ ಹರಿ ಬೀಳದಂತೆ ಪ
ಹನುಮನೊಡನೇ ಕಾಂತ ಮಾತ ಅನುವರದಲಿ ಆಡುತಿರಲು ವನಧಿ ಘೋಷವನ್ನೆ ಕಂಡು ವನಜ ಕರವನೆತ್ತಿಕೊಂಡು ನಿಲ್ಲಲು ಎನಲು ತ್ಯಜಿಸಿ ತನ್ನದರ್ಪನು ಆಸ್ಥಳದಿ ಧರೆಯದೋರಿ ಸುಮ್ಮನಿಪ್ಪನು ಆಂದಿಗಿಂದಿಗಿನಿತು ವಾಕ್ಯ ಮೆರೆದಪ್ಪನು 1
ಶರಧಿ ಮಥನದಲ್ಲಿ ಮುಣುಗು ತಿರಲು ಗಿಲಿಯನೆತ್ತಿ ನಿಳಹಿ | ಹೊರೆದೆ ಸುರರ ಬಳಿಕಧರಣಿ ಹಿರಣ್ಯಾಕ್ಷ ವಯ್ಯಲಾಗ ವರಹರೂಪದಿಂದ ಮೂಡಿದೇ ಈ ಜಗವ ಕೊರೆದಾಡಿ ಲೆತ್ತಿ ಆಡಿದ ಅಧೃವನ ತಿರಗದಂತೆ ಅಢಳ ನೀಡಿದೆ 2
ನಿನ್ನ ಕಥೆಯ ಶ್ರವಣಮಾಡಿ ನಿನ್ನ ನೋಡಿ ಕೂಡಿ ಪಾಡಿ ನಿನ್ನ ನಿರ್ಮಾಲ್ಯ ಘ್ರಾಣಿಸುತಲಿ ನಿನ್ನದಾಸ ನೆನಿಸಿ ಧನ್ಯಗತಿಯ ಪಡೆವ ತೆರದಲಿ ನಿಲಿಸಬೇಕು ಎನ್ನ ಮನವ ಕರುಣದಿಂದಲಿ ಮಹಿಪತಿಸುತನ್ನ ಸ್ವಾಮಿ ಸಲಹು ಜಗದಲಿ 3
***
No comments:
Post a Comment