ಕಾಖಂಡಕಿ ಶ್ರೀ ಕೃಷ್ಣದಾಸರು
ಉಧೋ ಉಧೋ ಉಧೋ ಉಧೋ ಉಧೋ ಯನ್ನಲು
ಉಧೋ ಮುದೋ ಪ
ತಮ್ಮನು ಪೊಗಳಿ ಪಾಲೆನೆ ಅಮ್ಮೊಮ್ಮಾ | ಮೊಮ್ಮನ ಪಡೆದಿಹ ಜಗದಯ್ಯಾ | ಸುಮ್ಮನ ಹೊಂದಿಹ ಬಾಲಕ ನಿಮ್ಮಾ | ಝಮ್ಮನೆ ಸ್ಮರಣೆಗೆ ಬಾನಮ್ಮಾ 1
ಛಂದ ವಿವೇಕದ ಚೌಡಕಿ ಹಿಡಿದು | ಒಂದೇ ನಿಷ್ಠೆಯ ತಂತಿಯ ಬಿಗಿದು | ಸುಂದರ ಭಕ್ತಿಯ ರಂಗಕ ಬಂದು | ಗೊಂದಳ ಹಾಕುವೆ ನಾನಿಂದು 2
ನಾಮಾವಳಿ ಕವಡೆಯ ಸರಥರಿಸಿ | ಪ್ರೇಮದ ಬಂಡಾರವ ಸುರಿಸಿ | ಆಮಹಾಜ್ಞಾನದ ಹೊತ್ತ ಪ್ರಜ್ವಲಿಸಿ | ನಾಮಗೆಜ್ಜಿಲಿ ಕುಣಿವೆನು ಘಲಿಸಿ 3
ಆವನಿಯ ಸುಜನರ ಮೊರೆಯನು ಕೇಳಿ | ಪರಿ ತಾಳಿ | ಭವ ಮಹಿಷಾಸುರ ನಸುವನು ಹೋಳಿ | ಜವದಲಿ ಮಾಡಿದೆ ತುನುಶೀಳಿ 4
ಮುನಿ ಮಾನಸ ತುಳಜಾಪೂರ ಗೇಹಿ | ಖೂನದೊರಿಸೀ ನಿಜ ಸೋಹೀ | ಏನೇ ನರಿಯದವನೆಂದರಿತು ಕಾಯೀ | ಘನಗುರು ಮಹಿಪತಿ ವರದಾಯಿ 5
***
No comments:
Post a Comment