Wednesday, 1 September 2021

ಎಲ್ಯಾಡಿ ನೀ ಬಂದ್ಯೋ ಹರಿ ಫುಲ್ಲಲೋಚನ ಕೃಷ್ಣ ankita mahipati


ಎಲ್ಯಾಡಿ ನೀ ಬಂದ್ಯೋ ಹರಿ ಫುಲ್ಲಲೋಚನ ಕೃಷ್ಣ ಪ 


ಬಲಿ ಮಹಿಮರನೆಲ್ಲ ಸಂರಕ್ಷಿಸಿ ಮಲ್ಲದೈತ್ಯರ ಹಲ್ಲು ಮುರಿದು ನೀ ಬಂದ್ಯೊ 1 

ಸುಗಮ ಸುಪಥದೋರಿ ನಿನ್ನ ಉಗಮ ಸಾರಿ ನೀ ಬಂದ್ಯೊ ನಗ ನೆಗಹಿ ನಿಂದು ಜಗದೋದ್ಧಾರವ ಮಾಡಿ ನೀ ಬಂದ್ಯೋ 2 

ಶರಣ ರಕ್ಷಕನಾಗಿ ನಿನ್ನ ಕರುಣ ನೀ ಬೀರಿ ಬಂದ್ಯೋ ತರಳಗೊಲಿದು ಧÀರಿ ಮೂರಡಿಯೆನೆ ಮಾಡಿ ಪರಶುಧರನಾಗಿ ಆಡಿ ನೀ ಬಂದ್ಯೊ 3 

ಮೊರೆಯ ಹೊಕ್ಕವರಿಗೆ ಪದ ಸ್ಥಿತವನಿತ್ತುನೀ ಬಂದ್ಯೊ ಸುರರ ಸ್ಥಾಪನೆ ಮಾಡಿ ತುರುಗಳ ಕಾಯಿದು ಪರ ನಾರೇರ ವ್ರತವಳಿದು ನೀ ಬಂದ್ಯೋ 4 

ನೀನೆ ರಾವುತನಾಗಿ ನಿನ್ನ ಖೂನ ನೀ ದೋರಿ ಬಂದ್ಯೊ ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜ ನೀನೆ ನೀನಾಗೆನ್ನ ಹೊರಿಯಲು ಬಂದ್ಯೊ 5

***


No comments:

Post a Comment