ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆವಾರೇನೋ ನಿನ್ನ ನೀನು ಗುರುತಾ ನೆಲೆ ಮಾಡದೆ | ಸಿರಿಯರಸನಸಿರಿ ಚರಣವ ಸ್ಮರಿಸದೇ | ನರದೇಹ ಬರಡವ ಮಾಡುವರೆ ಜಾಣಾ ಪ
ಹಲವು ಪುಣ್ಯದಿಂದಲ್ಲದೇ ಸುಲಭದಲ್ಲಿ ಜನ್ಮವು | ಇಳೆಯೊಳಗುದಯಿಸಿ ತಿಳಿಯದೆ ಸ್ವಹಿತದ | ಬಳಿಕೆಯ ನೆರೆಭವ ಬಲಿಯೊಳು ಸಿಲುಕಿ | ತೊಳಲುತ ನಿಶಿದಿನ ಬಳಲುವೆ ಜಾಣಾ 1
ಅವಗತಿಯೋ ಎನಗೆ ಮುಂದಾ | ಆವ ಜನಮ ವಿಹುದೋ | ವಿವೇಕದಿಂದ ವಿಚಾರಿಸಿ ಮನದೊಳು | ಭಾವಿಸಿ ಗುರುವಿನ ಪಾವನ ಪಾದಾ | ಭಾವಭಕುತಿಯಲಿ ಸಾವಧನನಾಗದೆ | ಹ್ಯಾವಹೆಮ್ಮೆಲೆ ದಿನಗಳೆದೇ ಜಾಣಾ 2
ಬದಿಯಲ್ಲಿದ್ದಾ ವಸ್ತುವನು | ಸದಗಾನಾದ್ಯೋ ಕಾಣದೆ | ಸಾಧುರ ಕೈಯಲಿ ಹಾದಿಯ ಕೇಳೆಲೋ | ಸಾದರದಲಿ ನಿಜ ಸಾಧನ ಬಲಿದು | ಭೇದಿಸು ಮಹಿಪತಿನಂದನ ಸಾರಿದಾ | ಗಾದಿಯನ್ನದೆ ಗತಿ ಸಾಧಿಸೋ ಜಾಣಾ 3
***
No comments:
Post a Comment