ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇವೆ ಬಂದದಾ ಖೂನವು | ಇದೇವೆ ಸಾರ್ಥಕ ಜನುಮವು ಪ 
ಹೊತ್ತು ಹೋಗದ ಬೀದಿ ಮಾತುಗಳಾಡದೆ ಚಿತ್ತಕ ಆಲೇಶ ತರಗುಡನು ಉತ್ತಮರೊಳುಕೂಡಿ ಶ್ರೀಹರಿ ಮಹಿಮೆಯಾ ನಿತ್ಯ ಕಥಾಮೃತ ಸೇವಿಪನು 1 
ಹಾಲವನೆರೆದರೆ ಸರಕನೆ ಕುಡಿಯದ ಬಾಲಕನಂದದಿ ಈ ಮನವು ಕಾಲಕಾಲಕ ಸದ್ಭೋದವ ಕೇಳಿಸಿ ಮ್ಯಾಲ ಸ್ವಹಿತ ಕೊಡುವನು 2 
ಉದರದ ಧಾವತಿಗನುದಿನ ಬೆರತಿರ ಇದರೊಳಗೆಚ್ಚರ ಹಿಡಿದಿಹನು ಮದಮತ್ಸರಳಿದು ಗುರುಮಹಿಪತಿ ಪದ ಪದುಮದಹಿಷ್ಠೆಯ ಜಡಿದಿಹನು 3
***
 
 
No comments:
Post a Comment