Wednesday, 1 September 2021

ನಮ್ಮ ಗುರುರಾಯನೇ ಸ್ಮರಿಸಿದಾಗಲಿಹನೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ನಮ್ಮ ಗುರುರಾಯನೇ | ಸ್ಮರಿಸಿದಾಗಲಿಹನೇ ಪ 


ಮನುಜನಾಗಿ ಬಂದನೇ | ಮತ್ರ್ಯದೊಳು ನಿಂದನೇ | ಜನನ ಮರಣ ಸಂದನೇ | ಜರಿಸಿ ಕೊಟ್ಟಾ ನಂದನೇ1 

ಚಿತ್ತದ ಮೈಲಿಗೆ ಕಳಿಸಿದನೇ | ಚಿದ್ಘನಾಮೃತ ಗರದನೇ | ಸತ್ಯ ವಾಕ್ಯಾ ಬಿತ್ತಿದನೇ ಸತ್ವದ ಹೊಲ ಬೆಳಸಿದನೇ2 

ಮಹಿಪತಿ ನಂದನ ಪ್ರಾಣನೇ | ಮಹಾಪ್ರಜ್ಞಾಪೂರ್ಣನೇ | ಇಹಪರ ಕೊಡುವ ತ್ರಾಣನೇ | ಮಹಿಮೆಗೆ ಎಣೆಗಾಣೆನೇ 3

***


No comments:

Post a Comment