Wednesday, 1 September 2021

ನಿನ್ನ ನೀ ತಿಳಿದು ನೋಡೋ ಕೇಳಲೋ ಪ್ರಾಣಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಿನ್ನ ನೀ ತಿಳಿದು ನೋಡೋ ಕೇಳಲೋ ಪ್ರಾಣಿ ಪ 


ನಿನ್ನ ನೀ ತಿಳಿದು ನೋಡೋ ಪನ್ನಗಾದ್ರೀಶನ ಕೂಡೋ ಬನ್ನ ಭವಣೆ ಈಡ್ಯಾಡೋ ಕೇಳೆಲೋ ಪ್ರಾಣಿ 1 

ನಾನಾರು ತನುವಾರು ತನುವಿ ನೊಡೆಯನಾರು ನಾನೀ ನೆಂಬುದರೊಳಾರು ಕೇಳೆಲೋ ಪ್ರಾಣಿ 2 

ಹಿಂದಿನ ಪುಣ್ಯಗಳಿಂದ ಬಂದು ನರ ದೇಹದಿಂದ ಬಂದೇನಾ ಘಳಿಸಿನಿಂದೇ ಕೇಳೆಲೋ ಪ್ರಾಣಿ 3 

ವಿದ್ಯಾ ವಿತ್ಪತ್ತಿ ತೋರಿ ಗದ್ಯ ಪದ್ಯಗಳ ಬೀರಿ ಬಿದ್ದಿ ಗರ್ವಾರಣ್ಯದಾರೀ ಕೇಳೆಲೋ ಪ್ರಾಣಿ 4 

ತಂದೆ ಮಹಿಪತಿ ದಯದಿಂದ ಪಡೆಯೋ ವಿಜಯ ಕಾಯ ಕೇಳೆಲೋ ಪ್ರಾಣಿ 5

****


No comments:

Post a Comment