ಕಾಖಂಡಕಿ ಶ್ರೀ ಕೃಷ್ಣದಾಸರು
ಉತ್ತೀರ್ಣವಾಗಲರಿಯರು | ತಮ್ಮ | ನಿತ್ಯನಿಂದಕ ದುರ್ಜನರಿಗೆ ಸುಜನರು ಪ
ಕೂಲಿಯ ಕೊಂಡು ವಸ್ತ್ರಂಗಳ ರಜಕನು | ಇಳಯೊಳು ವಗೆವನು ಕೈಗಳಿಂದಲ್ಲದೇ | ಮಲಿನವಗುಣ ಮೈಲಿಗೆ ಕಾಸು ಕೊಳದೇ | ಚಲಿಸದೆ ನಾಲಿಗೆಯಿಂದ ತೊಳೆವರಾಗಿ 1
ತ್ರಯದ ಬಾಡಿಗಿಕೊಂಡು ಹೆಚ್ಚುಗಂಟವ ಕೊಳ್ಳ | ವೈವನು ಹೆಜ್ಜೆಯ ಪಯಣದ ಮುಂದಕ | ನಯದಿಂದಿವರ ನಿಂದೆ ದೋಷ ಭಾರವ ಹೊತ್ತು | ಭಯವಹಾನಂತ ಜನ್ಮವ ಸೋಸುವರಾಗಿ 2
ಧರೆಯೊಳು ತಮ್ಮನ್ನ ತಾ ಉಂಡು ಬುಧರಿಗೆ | ಪರಮಸುಖವ ಕೊಟ್ಟು ದುಃಖವ ಕೊಂಬರು | ಗುರು ಮಹಿಪತಿಸುತ ಪ್ರಭು ಸ್ಮರಣೆಯನು ಬಿಟ್ಟು | ಇರಳ್ಹಗಲುದ್ಯೋಗ ಇದೇ ಮಾಡುವರಾಗಿ 3
***
No comments:
Post a Comment