Wednesday 1 September 2021

ಯತಿಕುಲಾಂಬುಜ ನಿಜತರಣಿ ಸದಾ ನುತಿಪ ಸುಜನರಿಗೆ ದೊರೆವೋನು ಕರುಣಿ ankita gurujagannatha vittala

 ..

ಯತಿ ಕುಲಾಂಬುಜ ನಿಜತರಣಿ ಸದಾ

ನುತಿಪ ಸುಜನರಿಗೆ ದೊರೆವೋನು ಕರುಣಿ ಪ


ಕ್ಷಿತಿಯೊಳಗೆ ಮಣಿಮಂತ ಮೊದಲಾ

ದತಿ ದುರಾತ್ಮರ ತತಿಯ ಖಂಡಿಸಿ

ವಿತತ ನಿಜಹರಿ ಮತವ ಸ್ಥಾಪಿಸಿ

ದತುಳ ಮಹಿಮನ ಸತತ ಸ್ಮರಿಸುವೆ ಅ.ಪ


ಹನುಮ ಭೀಮ ಮಧ್ವರಾಯನೆಂದು

ತನು ತ್ರಯದಿಂದಲಿ ಜನಿಸಿವ, ತೋಯ

ತನುಜ ಸಂಭವ ದೇವಿ ಕಾಯ ನೋಡಿ

ದನುಜ ಕೌರವರ ಕೊಂದನು ಭೀಮರಾಯ

ದಿನಕರ್ವಂಶಜ ಪಾದಕಮಲಕೆ

ಹನುಮ ಭಾಸ್ಕರನೆನಿ¥,À ಭೀಮನು

ಮನದಿ ಕೃಷ್ಣನ ಭಜಿಪ, ವ್ಯಾಸರ

ಅಣುಗನೆನಿಸುತ ಘನದಿ ಮೆರೆದನು 1


ರಾವಣಿ ಹಂತಕ ಹನುಮನೆನಿಸಿ

ಶೈವರಾಗ್ರಣಿ ಜರಾಸಂಧಾರಿ ಭೀಮ

ಪಾವನಾತ್ಮಕ ಮಧ್ವನಾಮ, ನಾನೆ

ದೇವರೆಂತೆಂಬೊ ಸಂಕರನ ನಿರ್ಧೂಮ

ದೇವನನುಜಗೆ ಜೀವನಿತ್ತನು

ದೇವಿ ಮೊರೆಯನು ಕೇಳಿ ಕುರುಗಳ

ಜೀವ ಹನನವ ಗÉೈದÀ ಭೀಮನು

ಶೈವ ಶಾಸ್ತ್ರವ ಮುರಿದ ಮಧ್ವನು 2


ಜಗಕೆ ಜೀವನನೆನಿಪ ಪ್ರಾಣ ದೇವ

ನಗವೈರಿ ಮಗನಿಗೆ ನಿರುತ ಸಂತ್ರಾಣ

ಬಗೆ ವಿಧ ವಿಧದ ಪ್ರಯಾಣದಿಂದ

ಜಗದಿ ಮೆರೆದ ಪದವಾಕ್ಯ ಪ್ರವೀಣ

ಮುಗಿವೆ ಹಸ್ತದ್ವಯವ ಶಾಖಾ

ಮೃಗ, ನರಾಧಿಪ, ನಿಗಮನಿರ್ಣಯ

ಜಗಕೆ ಗುರುಜಗನ್ನಾಥವಿಠಲನು

ನಿಗಮವಾಕ್ಯದಿ ನಗುತ ಪೇಳಿದ 3

***


No comments:

Post a Comment