Monday, 6 September 2021

ರಾಯರ ಪದಯುಗ ತೋಯಜವಿರಲೆಮರಾಯನ ಭಯವಿಲ್ಲ ಮನಕೆ ankita gurujagannatha vittala

 ರಾಗ: ಶಂಕರಾಭರಣ ತಾಳ: ಅಟ


ರಾಯರ ಪದಯುಗ ತೋಯಜವಿರಲೆಮ-

ರಾಯನ ಭಯವಿಲ್ಲ ಮನಕೆ


ಹೇಯಸಂಸಾರೆಂಬ ತೋಯಧಿ ದಾಟಿಸಿ

ಶ್ರೇಯಸ್ಸು ಸೌಖ್ಯವ ನೀಡೋದು ಜನಕೆ ಅ.ಪ


ಸ್ನಾನ ಸಂದ್ಯಾ ಜಪ ಧ್ಯಾನ ಮೌನವ ಬಿಟ್ಟು

ನಾನಾವ್ಯಸನದೊಳಗಿರುತಿರಲು

ಏನೇನು ವಿಧ ವಿಧ ಮಾನಾಪಮಾನವು

ಹಾನಿ ವೃದ್ಧಿ ಲಾಭಾಲಾಭವೇನು

ನೀನೆ ನೀಡುವಿ ಎಂಬ ಙÁ್ಞನದಿಂದನುಸಂ-

ಧಾನ ಮಾಡುತಲಿಪ್ಪ ನರಗೆ 1

ಸತಿ ಸುತ ಹಿತಜನ ವಿತತ ವೃತ್ತಿ ಕ್ಷೇತ್ರ

ಮಿತಿಯಿಲ್ಲ ಸೌಭಾಗ್ಯವತಿಶಯದಿ

ಪತಿತರ ಸಂಗದಿ ಮತಿಗೆಟ್ಟು ತಾ ಪರ

ಸತಿಯರಿಗೊಲಿದು ಅನುದಿನದಿ

ಸ್ತುತಿನತಿ ಶ್ರೀಹರಿ ಕಥೆಗಳ ಕೇಳದೆ

ವ್ರತನೇಮ ನಿರಾಹಾರ ತ್ಯಜಿಸಿ

ಸತತ ಮಾಡುವ ಕರ್ಮತತಿಗಳ ಗುರುಪಾದ

ವ್ರತತಿಜ ಯುಗಕೀವ ಮತಿಯುಳ್ಳ ನರಗೆ 2

ದಾತನಾಗದೆ ಪರಘಾತಕ ತಾನಾಗಿ

ಪಾತಕ ಕರ್ಮವ ಮಾಡಲೇನು

ರೀತಿಯಿಲ್ಲದೆ ಬಹು ಮಾತುಗಳಾಡುತ

ಜಾತಿಕುಲಾಚಾರ ತ್ಯಜಿಸಲೇನು

ಯಾತನಮಯ ಭವ ಪಾಥೋಧಿಯೋಳ-

ಗೀತೆರದಲಿ ಮುಳುಗಿರಲೇನು

ನೀತ ಗುರುಜಗನ್ನಾಥವಿಠಲಗತಿ-

ಪ್ರೀತನಾದ ಗುರು ದೂತನಾದವಗೆ 3

***


No comments:

Post a Comment