Wednesday 1 September 2021

ರಂಗನ್ಯಾಕೆ ಮಮತೆಕೊಟ್ಟು ದಣಿಸುವಿಕೃಷ್ಣ ನೀ ಕರುಣದಿ ಪಾಲಿಸೊ ankita gopala vittala

..

ರಂಗನ್ಯಾಕೆ ಮಮತೆಕೊಟ್ಟು ದಣಿಸುವಿಕೃಷ್ಣ ನೀ ಕರುಣದಿ ಪಾಲಿಸೊ ಪ.


ತನುವು ತನ್ನದು ಅಲ್ಲ ....ತನುವಿನ ಸಂಬಂಧಿಗಳೆಂಬೊ ಅವರ್ಯಾರೊನಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಂಗಳಅನುಭವ ಹಿಂದಿನ ದೇಹದಂತರ ಅರಿಯೆವೊ 1


ನಿನ್ನ ಹಂಬಲಿಸದೆ ಅನ್ಯ ವಿಷಯಗಳಿಗೆನ್ನನೊಪ್ಪಿಸುವದು ನೀತವೆಮನ್ನಿಸಿ ದಯದಿ ನೀ ಯನ್ನ ಪಾಲಿಸಲು ನಾನಿನ್ನ ನೇಮಕೆ ಪ್ರತಿಕೂಲನೆ 2


ಇಂದ್ರಿಯಂಗಳು ವಿಷಯಂಗಳಿಗೆಳೆಯೆ ಗೋ-ವಿಂದಯೆನ್ನ ವಶಕೆ ಬಾರದುಇಂದಿರೆಯರಸ ಬ್ರಹ್ಮೇಂದ್ರವಂದಿತ ಸುಖಸಾಂದ್ರ ಭವಮೋಚಕ ನಮೋ ನಮೋ 3


ಅರಿತು ಅರಿತು ಯನಗರೆಲವವಾದರುವಿರಕುತಿ ವಿಷಯದಿ ಬಾರದುಕರುಣಾಸಾಗರ ನಿಮ್ಮ ದರುಶನವಲ್ಲದೆಮರಳು ನೀಗುವ ಬಗೆ ಕಾಣೆನೊ 4


ಎಂದಿಗೆ ನಿನ್ನ ಚಿತ್ತಕ್ಕೆ ಬರುವದೊ ರಂಗಅಂದೆ ಉದ್ಧರಿಸಯ್ಯ ಎನ್ನನುಸುಂದರವಿಗ್ರಹ ಗೋಪಾಲವಿಠಲ ಸುಖ-ಸಾಂದ್ರ ಭವ ಮೋಚಕ ನಮೋ ನಮೋ 5

***

 

No comments:

Post a Comment