.. .
ಸಣ್ಣವರುದ್ದುಸಕಾಗಿ ಬಿನ್ನಯಿಸುವೆನು ನಾನುಎನ್ನ ಆಳುವ ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ಪ.
ಸಾಧುಸಂಗಗಳಿಲ್ಲ ಓದಿ ಕೇಳಿದರಲ್ಲಭೇದಅಭೇದಗಳ ಅರಿದುಯಿಲ್ಲಕ್ರೋಧ ಬಿಟ್ಟವರಲ್ಲ ಸಾಧುಗಳು ಯೋಗ್ಯತೆಲಿಹಾದಿ ಏನೀಜೀವರುಗಳಿಗೆ ಹೇ ಸ್ವಾಮಿ 1
ವಸ್ತ್ರದ ಮೂಲವು ಹತ್ತಿಯ ಕಾಳಹುದುಬಿತ್ತಿ ಬೆಳೆಸಿ ಅದರ ವ್ಯಕ್ತಿ ಮಾಡಿವಿಸ್ತರಿಸಿ ನೋಡಿಸಿದರೆ ಪಟ್ಟುವು ಆಗುವುದುವಸ್ತುಗಳ ವ್ಯಕುತಿ ನಿನ್ನಿಂದಾಗಬೇಕು 2
ಮಾಡಲರಿಯರು ತುತಿಯ ನೋಡಲರಿಯರು ನಿನ್ನಬೇಡಲರಿಯರು ತಮ್ಮ ಹಿತದ ಕಾಮಮಾಡುವರು ನಿನ್ನವರ ಮಮತೆಯಾದರು ಮನಸು-ಗೊಡು ಈಪರಿ ಜೀವಗಳಿಗೆ ಗತಿಯೇನೊ 3
ನಿನ್ನಿಂದ ಸೃಷ್ಟಿಯಾದ ಜೀವರುಗಳಿಗಿನ್ನುಇನ್ನು ಮೂರು ಬಗೆಯ ಭಕುತರೊಳಗೆಎನ್ನಿಂದ ಉತ್ತಮ ಮಧ್ಯಮಾಧಮರುಗಳುಇನ್ನಾವ ಇವರ ವಿವೇಕ ನೀ ಬಲ್ಲೆ 4
ಎನಗಿಂದುತ್ತಮರು ಎನಗೆ ಪ್ರಾರ್ಥಿಸುವರುಎನಗೆಂದವರಲೆನಗೆ ಹಿತ ಪೇಳ್ವರುಘನ ಅವರ ಮಧ್ಯಸ್ಥರನು ಹುಡುಕ ತಿಳಿಯದುಅನುವರಿತು ಅವರವರ ಗತಿಗೆ ಅನುಕೂಲನಾಗು 5
ನೀತವನು ನೀ ಬಲ್ಲೆ ಅವರವರ ಸಾಧನವುಯಾತಕೆ ಅವರಗೊಡವೆ ನಿನಗೆ ಎಂಬ್ಯನೀತವಾಗಿದೆ ನೋಡೊ ಪರಸ್ಪರ ಜೀವರಿಗೆಪ್ರಾರ್ಥನೆಯು ಎಂಬುವುದು ಮಾತು ಪುಸಿಯಲ್ಲ 6
ನಿನ್ನವರು ಆಗಿ ಪಾಡನುಬಡುತ ಇಪ್ಪುವರಕಣ್ಣಲಿಕಂಡು ನಾ ಬಿಡುವನಲ್ಲಮನ್ನಿಸು ನಿನ್ನ ಚಿತ್ತ ಮನ್ನಿಸದಲೆ ಪೋಗುಎನ್ನ ಸ್ವಭಾವವಿದೆ ಗೋಪಾಲವಿಠಲ 7
***
No comments:
Post a Comment