Wednesday, 1 September 2021

ಏನು ವೈಭವವೊ ಶ್ರೀನಿವಾಸ ಧೊರೆಯೆನಿನ್ನದೇನು ವೈಭವವೊ ankita gadugina veeranarayana

 ..

kruti by ವೀರನಾರಾಯಣ Veeranarayana 

ರಾಗ -  :  ತಾಳ -


ಏನು ವೈಭವವೋ ಶ್ರೀನಿವಾಸ ಧೊರೆಯೆ

ನಿನ್ನದೇನು ವೈಭವವೊ ll ಪ ll


ಸಿರಿಯು ತಾನೆ ನಿಂತು ನಿನ್ನ

ನಿರುತ ಸೇವೆ ಗೈಯ್ಯುತಿಹಳೊ

ಸರಸಿಜಾಸನಾದಿ ಸುರರು

ಕರವ ಮುಗಿದು ತುತಿಸುತಿಹರೂ ll 1 ll


ನಾಗರಾಯ ದಿವ್ಯಾಸನ

ನಾಗಿ ಹೆಡೆಯ ಛತ್ರ ಪಿಡಿವ

ಯೋಗಿ ನಾರದ ತುಂಬುರಾರು

ರಾಗ ಮಾಡಿ ಹಾಡುತಿಹರೊ ll 2 ll


ಗರುಡ ವಾಯು ಸುತರು ನಿನ್ನ

ಪರಮ ವಾಹನರಾಗಿ ಬಹರು

ಸುರಮುನಿಗಳು ಸಕಲ ನರರು

ನಿರುತನಾಮ ಜಪಿಸುತಿಹರು ll 3 ll


ಮಂಗಳ ವಾದ್ಯಗಳು ಮೊಳಗಿ

ಮಂಗಳಾರತಿಯಾಗಿ ಬೆಳಗಿ

ತಿಂಗಳು ನೇಸರರು ದಿವ್ಯ

ಮಂಗಳ ದೀವಟಿಗರಾಗಿ ll 4 ll


ಕ್ಷೀರದಲ್ಲಿ ನಿನ್ನ ಸ್ನಾನ 

ಸಾರ ಅಮೃತ ನಿನ್ನ ಪಾನ

ತೋರ ಭಕುತರಾಳೆ ಗದಗು 

ವೀರನಾರಾಯಣನೆ ನಿನ್ನದೇನು ವೈಭವವೊ ll 5 ll

***


ಏನು ವೈಭವವೊ ಶ್ರೀನಿವಾಸ ಧೊರೆಯೆನಿನ್ನದೇನು ವೈಭವವೊ ಪ


ಸಿರಿಯು ತಾನೆ ನಿಂತು ನಿನ್ನನಿರುತ ಸೇವೆ ಗೈಯ್ಯುತಿಹಳೊಸರಸಿಜಾಸನಾದಿ ಸುರರುಕರವ ಮುಗಿದು ತುತಿಸುತಿಹರೂ 1


ನಾಗರಾಯ ದಿವ್ಯಾಸನನಾಗಿ ಹೆಡೆಯ ಛತ್ರ ಪಿಡಿವಯೋಗಿ ನಾರದ ತುಂಬುರಾರುರಾಗ ಮಾಡಿ ಹಾಡುತಿಹರೊ 2


ಗರುಡ ವಾಯು ಸುತರು ನಿನ್ನಪರಮ ವಾಹನರಾಗಿ ಬಹರುಸುರಮುನಿಗಳು ಸಕಲ ನರರುನಿರುತನಾಮ ಜಪಿಸುತಿಹರು 3


ಮಂಗಳ ವಾದ್ಯಗಳು ಮೊಳಗಿಮಂಗಳಾರುತಿಯಾಗಿ ಬೆಳಗಿತಿಂಗಳು ನೇಸರರು ದಿವ್ಯಮಂಗಳ ದೀವಟಿಗರಾಗಿ 4


ಕ್ಷೀರದಲ್ಲಿ ನಿನ್ನ ಸ್ನಾನಸಾರ ಅಮೃತ ನಿನ್ನ ಪಾನತೋರ ಭಕುತರಾಳೆ ಗದಗುವೀರನಾರಾಯಣನೆ ನಿನ್ನದೇನು ವೈಭವವೊ 5

***


No comments:

Post a Comment