Tuesday, 5 October 2021

ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ ankita bheemesha krishna NODIRI RAGHAVENDRARA MAADIRI NAMASKARA

 


ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ

ಬೇಡಿದ ಇಷ್ಟ ವರ ನೀಡುವರು ನಮ್ಮ ಯತಿವರ ಪ


ಮಂತ್ರಾಲಯದಿ ನಿಂತಿಹ ಚಿಂತೆಗಳ ಪರಿಹರಿಸುವ

ಕಂತುಪಿತನನಂತಗುಣ ತನ್ನಂತರಂಗದಿ ಸ್ತುತಿಸುವ

ಇಂಥ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಡು

ಮಂತ್ರಾಕ್ಷತೆ ಫಲ ನೀಡಿ ತಾ ಸಂತಾನ ಸಂಪತ್ತು ಕೊಡುವರ 1


ಭೂತ ಪ್ರೇತ ಭಯಗಳ ವಾತ ಪಿತ್ತ ವ್ಯಾಧಿಗಳ

ಸೇತು (ಶ್ವೇತ?) ಕುಷ್ಠರೋಗಗಳ ಪಾತಕಿಯರ ಪಾಪಗಳ

ಪ್ರೀತಿಲಿಂದ ಕಳೆವರೊ ಪ್ರಖ್ಯಾತರಾಗಿ ಬೆಳೆವರೊ

ಭೂತಳದಿ ಸನ್ನೀತ (ಸನ್ನಿಹಿತ?) ರಾದ ಸೀತಾಪತಿ ನಿಜದೂತರೆನಿಸೋರು 2


ಭಜಸÉ ಭಕ್ತರ ನೋಡುವ ಸದನಕೆ ಬಂದುಕೂಡುವ

ಒದಗಿದಾಪತ್ತು ದೂಡುವ ಬಂದು ಮುದದಿ ತಾ ದಯಮಾಡುವ

ಅಜನಯ್ಯನ ಕೊಂಡಾಡುತ ತುಂಗಾನದಿಯ ತೀರ ವಾಸವಾಗಿ

ಹೃದಯದೊಳು ಭೀಮೇಶ ಕೃಷ್ಣನ ಪದವ ಭಜಿಸಿ ಪಡೆವರಾನಂದವ3

***


" ಭೀಮವ್ವನವರ ಕಣ್ಣಲ್ಲಿ ಶ್ರೀ ಮಂತ್ರಾಲಯ ಪ್ರಭುಗಳು "


ನೋಡಿರಿ ರಾಘವೇಂದ್ರರ ।

ಮಾಡಿರಿ ನಮಸ್ಕಾರ ।

ಬೇಡಿದ ಇಷ್ಟಾವರ ।

ನೀಡುವ ನಮ್ಮ ಯತಿವರ ।। ಪಲ್ಲವಿ ।।


ಮಂತ್ರಾಲಯದಿ ನಿಂತಿಹ ।

ಚಿಂತೆಗಳ ಪರಿಹರಿಸುವ ।

ಕಂತುಪಿತನನಂತ ಗುಣ । ತ ।

ನ್ನಂತರಂಗದಿ ಸ್ತುತಿಸುವ ।।

ಇಂಥಾ ಯತಿಗಳ ಕಾಣೆ । ಹರಿಯೇ ।

ಕಾಂತ ಭಕ್ತರೆನಿಸಿಕೊಂಬುವ ।

ಮಂತ್ರಾಕ್ಷತೆ ಫಲ ನೀಡಿ ।

ಸಂತಾನ ಸಂಪತ್ತು 

ಕೊಡುವರ ।। ಚರಣ ।।


ಭೂತ ಪ್ರೇತ ಭಯಗಳ ।

ವಾತ ಪಿತ್ತ ವ್ಯಾಧಿಗಳ ।

ಸೇತು ಕುಷ್ಟ ರೋಗಗಳ ।

ಪಾತಕಿಯರ ಪಾಪಗಳ ।।

ಪ್ರೀತಿಲಿಂದ ಕಳೆವರೋ ।

ಪ್ರಖ್ಯಾತರಾಗಿ ಬೆಳೆವರೋ ।

ಭೂತಳದಿ ಸನ್ನಿಹಿತರಾದ ।

ಸೀತಾಪತಿ ನಿಜಮಾತ-

ರೆನಿಸೋರೋ ।। ಚರಣ ।।


ಭಜಿಸೆ ಭಕ್ತರ ನೋಡುವ ।

ಸದನಕೆ ಬಂದು ಕೂಡುವ ।

ಒದಗಿದಾಪತ್ತು ದೂಡುವ ।

ಮುದದಿ ತಾ ದಯ ಮಾಡುವಾ ।।

ಅಜನನಯ್ಯನ ಕೊಂಡಾಡುತ ।

ತುಂಗಾ ನದಿಯ ತೀರ ವಾಸವಾಗಿ ।

ಹೃದಯದೊಳು ಭೀಮೇಶಕೃಷ್ಣನ ।

ಪದವ ಭಜಿಸಿ ಪಡೆವರಾನಂದವ ।। ಚರಣ ।।

***


ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ


ಬೇಡಿದ ಇಷ್ಟವರ ನೀಡುವರು ನಮ್ಮ ಯತಿವರ ||ಪ||


ಮಂತ್ರಾಲಯದಲಿ ನಿಂತಿಹ ಚಿಂತೆಗಳ ಪರಿಹರಿಸುವ


ಕಂತುಪಿತನನಂತಗುಣ ತನ್ನಂತರಂಗದಿ ಸ್ತುತಿಸುವ


ಇಂಥಾ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಬುವ


ಮಂತ್ರಾಕ್ಷತೆ ಫಲ ನೀಡಿ ತಾ ಸಂತಾನ ಸಂಪತ್ತು ಕೊಡುವರ || 1 ||


ಭೂತ ಪ್ರೇತ ಭಯಗಳ ವಾತಪಿತ್ತ ವ್ಯಾಧಿಗಳ


ಶ್ವೇತ ಕುಷ್ಠ ರೋಗಗಳ ಪಾತಕಿಯರ ಪಾಪಗಳ


ಪ್ರೀತಿಯಿಂದ ಕಳೆವರ ಪ್ರಖ್ಯಾತರಾಗಿ ಬೆಳೆವರ


ಭೂತಳದಿ ಸನ್ನಿಹಿತರಾಗಿ ಸೀತಾಪತಿ ನಿಜ ದಾಸರೆನಿಪರ || 2 ||


ಭಜಿಸೆ ಭಕ್ತರ ನೋಡುವ ಸದನಕೆ ಬಂದು ಕೂಡುವ


ಒದಗಿದಾಪತ್ತು ದೂಡುವ ಮುದದಿ ತಾ ದಯಮಾಡುವ


ಅಜನಯ್ಯನ ಕೊಂಡಾಡುತ ತುಂಗಾನದಿಯ ತೀರ ವಾಸವಾಗಿ


ಹೃದಯದೊಳು ಭೀಮೇಶಕೃಷ್ಣನ ಪದವ ಭಜಿಸಿ ಪಡೆವರಾನಂದವ || 3 ||

***


nODiri rAghavEMdrara mADiri namaskAra

bEDida iShTavara nIDuvaru namma yativara ||pa||


maMtrAlayadali niMtiha, ciMtegaLa pariharisuva

kaMtupitananaMtaguNa tannaMtaraMgadi stutisuva

iMthA yatigaLa kANe hariyEkAMta bhaktarenisikoMbuva

maMtrAkShate phala nIDi Ta saMtAna saMpattu koDuvara || 1 ||


bhUtaprEta bhayagaLa vAtapitta vyAdhigaLa

SvEta kuShTha rOgagaLa pAtakiyara pApagaLa

prItiliMda kaLevaro prakhyAtarAgi beLevaro

bhUtaLadi sannihitarAda sItApati nija Dararenipara || 2 ||


bhajise bhaktara nODuva sadanake baMdu kUDuva

odagidApattu dUDuva mudadi tA dayamADuva

ajanayyana koMDADuta tuMgAnadiyatIra vAsavAgi

hRudayadoLu bhImESakRuShNana padava bhajisi

paDevarAnaMdava || 3 ||

***




No comments:

Post a Comment