Thursday, 5 August 2021

ಶರಣು ಶರಣು ಶರಣು ವಿಜಯದಾಸಾರ್ಯರೆ ವಿಜಯ vijaya dasa charitre ದಾಸ ಚರಿತ್ರೆ ankita prasannashreenivasa vijaya dasa stutih

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ವಿಜಯ ದಾಸಾರ್ಯ ಚರಿತ್ರೆ


ಶರಣು ಶರಣು ಶರಣು ವಿಜಯದಾಸಾರ್ಯರೆ

ಶರಣಾದೆ ತವ ವಾರಿಜಾಂಘ್ರಿಯುಗ್ಮದಲಿ

ಸೂರಿ ಸುರ ಜನ ಗಂಗಾಧರ ವಾಯು ವಿಧಿ ಎನುತ

ಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪ


ಅಶೇಷ ಗುಣಗಣಾರ್ಣವ ಅನಘ ಶ್ರೀರಮಣ

ಶ್ರೀ ಶ್ರೀನಿವಾಸ ನರಹರಿ ವ್ಯಾಸ ಕೃಷ್ಣ

ಹಂಸ ನಾಮಕ ಪರಂ ಬ್ರಹ್ಮ ವಿಧಿ ಸನಕಾದಿ

ದಶಪ್ರಮತಿ ಗುರುವಂಶ ಸರ್ವರಿಗೂ ನಮಿಪೆ 1

ವ್ಯಾಸರಾಜರ ಮುಖ ಕಮಲದಿಂದುಪದಿಷ್ಟ

ದಾಸರಾಜರು ಪುರಂದರದಾಸಾರ್ಯ

ವಸುಧೆಯಲ್ಲಿ ನಾರದರೇ ಪುರಂದರ ದಾಸರು ಎನಿಸಿ

ಶ್ರೀಶನ್ನ ಸೇವಿಸುತ ಭಕ್ತÀನ್ನ ಕಾಯ್ತಿಹರು 2

ಹರಿ ಸಮೀರರೂ ಸದಾ ಪ್ರಚುರರಾಗಿಹ

ಪುರಂದರ ದಾಸಾರ್ಯರ ವರ ಶಿಷ್ಯರೇವೆ

ಧರೆಯಲ್ಲಿ ಪ್ರಖ್ಯಾತ ವಿಜಯದಾಸಾರ್ಯರು

ಸುರವೃಂದ ಮಹಾ ಋಷಿಯು ಭೃಗು ಮಹಾ ಮುನಿಯು 3

ಋಗ್ ಜಯಾಸಿತ ಯಜುಸ್ ಸಿತ ಯಜುಸ್ಸಾಮ

ಅರ್ಥರ್ವಾಂಗಿರಸಕೆ ಕ್ರಮದಲಿ ಪ್ರವರ್ತಕರು

ಬಾಗುವೆ ಶಿರ ಪೈಲಗೆ ವೈಶಂಪಾಯನನಿಗೆ

ಅರ್ಕಗೆ ಜೈಮಿನಿಗೆ ಸುಮಂತು ಸಿಂಧುಜಗೆ 4

ನಮೋ ಬ್ರಹ್ಮ ವಾಯು ವಿಪ ಫಣಿಪ ಶುಕ ಸಂಕ್ರಂದ

ಕಾಮಾರ್ಕ ನಾರದ ಭೃಗು ಸನತ್‍ಕುಮಾರಾದಿ

ಕಾಮಯುಕ್ ಸೂತ ಗಂಧರ್ವ ನೃಪ ಶ್ರೇಷ್ಠರಿಗೆ

ಭೂಮಿ ಸುರ ನರರಿಗೆ ಶ್ರೀಶ ಚಲಪ್ರತಿಕ 5

ಸ್ವರ್ಣಾಂಡ ಬಹಿರಂತವ್ರ್ಯಾಪ್ತ ತೇಜ ಪುಂಜ

ಜ್ಞಾನ ಸುಖ ಪೂರ್ಣ ಶ್ರೀಪತಿ ವೇದ ವ್ಯಾಸ

ಜ್ಞಾನ ಸಂಯುತ ಕರ್ಮಯೋಗ ಪ್ರವರ್ತಿಸುವುದಕೆ

ತಾನೇ ಸೇವಿಸಿದನು ಭೃಗು ಋಷಿಯು ಅಂದು 6

ಸುರ ನದಿ ತೀರದಲಿ ಭೂಸುರರು ಋಷಿಗಳು

ಸತ್ರಯಾಗ ಎಂಬಂಥ ಜ್ಞಾನ ಕರ್ಮ

ಚರಿಪೆ ಜಿಜ್ಞಾಸದಲಿ ನಾರದರು ಪ್ರೇರಿಸಿ

ಹೊರಟರು ಭೃಗು ಮುನಿಯು ತತ್ವ ನಿರ್ಣಯಕೆ 7

ಶೃತಿ ಸ್ಮøತಿ ಪುರಣೇತಿಹಾಸಾದಿಗಳಲ್ಲಿ

ಅದ್ವಿತೀಯನು ಸರ್ವೋತ್ತಮ ಹರಿ ಶ್ರೀಶ

ಪದುಮಭವ ರುದ್ರಾದಿ ಸುರರು ತಾರ ತಮ್ಯದಲಿ

ಸದಾ ಅವರಂಬುದನು ಪರಿಕ್ಷೆ ಮಾಡಿದರು 8

ನೇರಲ್ಲಿ ತಾ ಪೋಗಿ ಅರಿತು ಪೇಳಿದರು

ಹರಿಃ ಸರ್ವೋತ್ತಮ ಸಾಕ್ಷಾತ್ ರಮಾದೇವಿ ತzನÀಂತರ

ಸರಸಿಜಾಸನ ವಾಣಿ ರುದ್ರಾದಿ ಸುರರು

ತರತಮದಿ ಅವgವÀರು ಸಂಶಯವಿಲ್ಲ ಎಂದು 9

ಈ ರೀತಿ ಹಿಂದೆ ಈ ಭೃಗು ಹರಿಯ ನಿಯಮನದಿ

ಅರುಹಿದಂತೆ ಈಗ ವಿಜಯ ದಾಸಾರ್ಯ

ನಾರದ ಪುರಂದರ ದಾಸಾರ್ಯರನ್ನನುಸರಿಸಿ

ಹರಿ ಮಹಿಮೆ ಸತ್ ತತ್ವ ಅರುಹಿದರು ಜನಕ್ಕೆ 10

ವಿಜಯರಾಯರ ಶಿಷ್ಯ ಸೂರಿಗಳೊಳ್ ಪ್ರವರನು

ಧೂರ್ಜಟೆ ಉಮಾಸುತನು ಕ್ಷಿಪ್ರ ಪ್ರಸಾದ

ಗಜ ಮುಖನೆ ಗೋಪಾಲ ದಾಸಾರ್ಯರಾಗಿ

ಪ್ರಜ್ವಲಿಸುತಿಹ ನಮೋ ಗುರುವರ್ಯ ಶರಣು 11

ಪುರಂದರ ದಾಸಾರ್ಯರು ವಿಜಯರಾಯರಲ್ಲಿ

ಇರುವರು ಒಂದಂಶದಿಂದ ಜ್ವಲಿಸುತ್ತ

ಬರೆಸಿಹರು ಇಪ್ಪತ್ತು ಮೇಲೈದು ಸಾವಿರ

ಶ್ರೀವರನ ಸಂಸ್ತುತಿ ತತ್ವ ಕವಿತೆಗಳ 12

ಕೃತ ತ್ರೇತ ದ್ವಾಪರ ಕಲಿಯುಗ ನಾಲ್ಕಲ್ಲಿಯೂ

ಸುತಪೋನಿಧಿ ಭೃಗು ಮೂಲ ರೂಪದಲು

ತ್ರೇತಾದಿ ಮೂರಲ್ಲಿಯೂ ಅವತಾರ ರೂಪದಲು

ಗಾಯತ್ರಿ ನಾಮನ್ನ ಸಂಸೇವಿಸುವರು 13

ಪುರಂದರಾರ್ಯರ ಮನೆಯಲ್ಲಿ ಗೋವತ್ಸ

ತರುವಾಯು ಸುಕುಮಾರ ಮಧ್ವಪತಿಯಾಗಿ

ಸರಿದ್ವರ ಶ್ರೀ ತುಂಗಭದ್ರ ತೀರದಿ ಪುನಃ

ಅರಳಿ ನೃಸಿಂಹ ಕ್ಷೇತ್ರದಲಿ ತೋರಿಹರು 14

ಅಶ್ವತ್ಥ ನರಸಿಂಹ ಕ್ಷೇತ್ರಕ್ಕೆ ಮತ್ತೊಂದು

ಹೆಸರುಂಟು ರೂಢಿಯಲಿ ಚೀಕಲಾಪುರಿಯು

ಕುಸುಮ ಭವ ಪಿತ ಅಂಭ್ರಣಿ ಪತಿ ಎನ್ನ

ಪ್ರಶಾಂತ ಚಿತ್ತದಿ ಧ್ಯಾನಿಸೆ ತಕ್ಕ ಸ್ಥಳವು 15

ಶ್ರೀ ಪದ್ಮನಾಭ ತೀರ್ಥರ ಕರ ಕಂಜದಿಂದ

ಉದ್ಭೂತ ಲಕ್ಷ್ಮೀಧರರ ವಂಶಜರು

ಶ್ರೀಪಾದ ರಾಜರೂ ಈ ಕ್ಷೇತ್ರದಲಿ

ಸ್ಥಾಪಿಸಿದರು ಅಶ್ವತ್ಥÀ ನರಹರಿಯ 16

ಹುಂಬೀಜ ಪ್ರತಿಪಾದ್ಯ ಭೂಪತಿಯ ವಕ್ತ್ರದಿಂ

ಸಂಭೂತ ತುಂಗಾ ಸರಿದ್ವರದ ತೀರ

ಗಂಭೀರ ಭೂ ಕಲ್ಪತರುವು ಅಶ್ವತ್ಥ್ಥವು

ಸಂರಕ್ಷಿಸುವ ನಾರಸಿಂಹ ಭದ್ರದನು 17

ನಾರಾಯಣ ಬ್ರಹ್ಮರುದ್ರಾದಿ ದೇವರ್‍ಗಳು

ಇರುತಿಹರು ಅಶ್ವತ್ಥ್ಥ ಕಲ್ಪ ವೃಕ್ಷದಲಿ

ನಾರಾಯಣ ಶ್ರೀ ನರಸಿಂಹ ಪುರುಷೋತ್ತಮನೆ

ಶರಣಾದೆ ಪೊರೆಯುತಿಹ ವಾಂಛಿತ ಪ್ರದನು 18

ಕಾಶಿ ಬದರಿಯಂತೆ ಇರುವ ಈ ಕ್ಷೇತ್ರದಲಿ

ಭೂಸುರವರರು ಶ್ರೀನಿವಾಸಾಚಾರ್ಯರಲಿ

ಶ್ರೀ ಶ್ರೀನಿವಾಸನ ಪ್ರಸಾದದಿ ಜನಿಸಿಹರು

ಶ್ರೀಶ ಭಕ್ತಾಗ್ರಣಿ ಈ ಹರಿದಾಸವರರು 19

ಕುಸುಮಾಲಯ ಪದ್ಮಾವತಿ ನೆನಪು ಕೊಡುವ

ಕುಸುಮ ಕೋಮಲ ಮುಖಿ ಆದ ಕಾರಣದಿ

ಕೂಸಮ್ಮ ನೆಂದು ಕರೆಯಲ್ಪಟ್ಟ ಸಾಧ್ವಿಯ

ಈ ಶ್ರೀನಿವಾಸ ಆಚಾರ್ಯ ಕರ ಹಿಡಿದರು 20

ಪತಿವ್ರತಾ ಶಿರೋಮಣಿ ಕೂಸಮ್ಮನ ಗರ್ಭ

ಅಬ್ಧಿಯಿಂ ಹುಟ್ಟಿತು ಉತ್ತಮ ರತ್ನ

ಹತ್ತು ದಿಕ್ಕಲು ಪ್ರಕಾಶಿಸುವ (ದ್ಯುತಿವಂತ) ಕೀರ್ತಿಮಾನ್

ಪುತ್ರ ರತ್ನನು ಬೆಳೆದ ದಾಸಪ್ಪ ನಾಮಾ 21

ಕೂಸಮ್ಮ ಶ್ರೀನಿವಾಸಪ್ಪ ದಂಪತಿಗೆ

ದಾಸಪ್ಪನಲ್ಲದೆ ಇನ್ನೂ ಕೆಲಪುತ್ರರು

ಕೇಶವಾನುಗ್ರಹದಿ ಹುಟ್ಟಿ ಸಂಸಾರದಿ

ಈಜಿದರು ಯದೃಚ್ಛಾ ಲಾಭ ತುಷ್ಟಿಯಲಿ 22

ಯಾರಲ್ಲೂ ಕೇಳದಲೇ ಅನಪೇಕ್ಷ ದಂಪತಿಯು

ಹರಿದತ್ತ ಧನದಲ್ಲಿ ತೃಪ್ತರಾಗುತ್ತ

ಅರಳಿ ನೃಸಿಂಹನ್ನ ಸೇವಿಸುತ ಮಕ್ಕಳಲಿ

ಹರಿ ಮಹಿಮೆ ಹೇಳುತ್ತ ಭಕ್ತಿ ಬೆಳಸಿದರು 23

ನಮ್ಮ ದಾಸಪ್ಪನಿಗೆ ಹದಿನಾಲ್ಕು ಮಯಸ್ಸಾಗೆ

ಕರ್ಮ ಸುಳಿಯು ಮೆಲ್ಲ ಮೆಲ್ಲನೆ ತೋರಿ

ಸಮುದ್ರ ಶಯನನ ಅಧೀನವು ಎಲ್ಲ ಎನ್ನುತ್ತ

ಒಮ್ಮೆಗೂ ಲೆಕ್ಕಿಸಲಿಲ್ಲ ಬಡತನವನ್ನ 24

ಬದರ ಮುಖ ಬ್ರಹ್ಮವರ್ಚಸ್ವಿ ದಾಸಪ್ಪ

ಹದಿನಾರುವತ್ಸರದ ಬ್ರಹ್ಮಚಾರಿ

ಮಾಧವನೆ ಹಾದಿ ತೋರುವ ತನಗೆ ಎಂದು

ಹೋದರು ಪೂರ್ವದಿಕ್ಕಿನ ಕ್ಷೇತ್ರಗಳಿಗೆ 25

ಜಲರೂಪಿ ಕೃಷ್ಣನ್ನ ನೆನೆದು ಕೃಷ್ಣಾನದಿ

ಯಲ್ಲಿ ಮಿಂದು ಅಲ್ಲಿಂದ ಮಂತ್ರಾಲಯ

ಅಲ್ಲಿ ಶ್ರೀ ರಾಘವೇಂದ್ರರ ವಾದೀಂದ್ರರ ದಿವ್ಯ

ಜಲಜಪಾದಗಳಿಗೆ ಬಾಗಿದರು ಶಿರವ 26

ಆದವಾನಿ ನಗರ ನವಾಬನ ಸರ್ಕಾರ

ಅಧಿಕಾರಿ ಡಾಂಭಿಕ ಓರ್ವನ ಗೃಹದಿ

ಮದುವೆ ಪೂರ್ವದ ದೇವರ ಸಮಾರಾಧನೆಯು

ಹೋದರು ಆ ಮನೆಗೆ ದಾಸಪ್ಪ ಆರ್ಯ 27

ಇತ್ತದ್ದು ಹರಿಯೆಂದು ತಂದೆ ಮಾಡುವ ಅತಿಥಿ

ಸತ್ಕಾರ ನೋಡಿದ್ದ ದಾಸಪ್ಪಾರ್ಯನಿಗೆ

ಇಂದು ಆದವಾನಿ ಗೃಹಸ್ಥ ದಾಸಪ್ಪನ

ಉದಾಸೀನ ಮಾಡಿದ್ದು ನೂತನಾನುಭವ 28

ತೇನ ತ್ಯೆಕ್ತೇನ ಭುಂಜೀಥಾಃ ಮಾಗೃಥೆಃ

ಕಸ್ಯ ಸ್ವಿದ್ಧನಂ ಎಂದು ಮನಸ್ಸಿಗೆ ತಂದು

ಆದವಾನೀಯಿಂದ ಹೊರಟು ಮಾರ್ಗದಲಿ

ಇದ್ದ ಛಾಗಿ ಎಂಬ ಗ್ರಾಮ ಸೇರಿದರು 29

ಉಪೋಷಣದಿ ತನುವು ಬಾಡಿದ್ದರೂ ಮುಖ

ಸ್ವಲ್ಪವೂ ಮ್ಲಾನ ವಿಲ್ಲದೆ ಹರಿಯ ಸ್ಮರಿಸಿ

ಬಪ್ಪ ದಾಸಪ್ಪನ್ನ ನೋಡಿ ಕೇಶವರಾಯ

ಎಂಬ ವಿಪ್ರನು ಕರೆದ ತನ್ನ ಮನೆಗೆ 30

ಛಾಗಿ ಗ್ರಾಮದ ಪ್ರಮುಖ ಕೇಶವರಾಯನು

ಆ ಗೃಹಸ್ಥನ ತಾಯಿ ಕುಟುಂಬಜನರೆಲ್ಲಾ

ಭಗವಂತನ ಶ್ರೇಷ್ಠ ಪ್ರತೀಕ ಇವರೆಂದು

ಭಾಗಿ ಶಿರ ಆತಿಥ್ಯ ನೀಡಿದರು ಮುದದಿ 31

ಆ ಮನೆಯ ದೊಡ್ಡ ಆಕೆಯು ಪಾಕ ಮಾಡಿ

ಶ್ರೀ ಮನೋಹರನಿಗೆ ದಾಸಪ್ಪ ಅದನ್ನ

ಸಂಮುದದಿ ನೈವೇದ್ಯ ಅರ್ಪಿಸಿ ಉಂಡರು

ರಮಾ ಪತಿ ನಿತ್ಯ ತೃಪ್ತಗೆ ತೃಪ್ತಿ ಆಯ್ತು 32

ಭಿನ್ನಸ್ವಭಾವಿಗಳು ಭಿನ್ನಜೀವರುಗಳಲಿ

ಭಿನ್ನ ಕರ್ಮವ ಮಾಡಿ ಮಾಡಿಸುವ ಅನಘ

ಘನ್ನ ಗುಣನಿಧಿ ಸರ್ವ ಜಡಜೀವ ಭಿನ್ನ

ಶ್ರೀನಿಧಿಯ ಸ್ಮರಿಸುತ್ತೆ ಹೊರಟರು ವೇಂಕಟಕೆ 33

ಭೂವೈಕುಂಠ ಈ ತಿರುಪತಿ ಕ್ಷೇತ್ರದಲಿ

ದೇವದೇವೋತ್ತಮ ದೇವಶಿಖಾಮಣಿಯ

ಮೂವತ್ತೆರಡು ಮುವತ್ತಾರು ಬಾರಿ ಮೇಲೆ

ಸೇವಿಸಿಹರು ಎಂದು ಕೇಳಿಹೆನು 34

ದಾಸಪ್ಪ ನಾಮದಲೂ ವಿಜಯರಾಯರೆನಿಸಿಯೂ

ದೇಶದೇಶದಿ ಹರಿಕ್ಷೇತ್ರ ಪೋಗಿಹರು

ಕಾಶೀಗೆ ಮೂರು ಸಲ ಪೋಗಿ ಬಂದಿರುವರು

ಕಾಶಿ ಬದರಿ ನಮಗೆ ಇವರ ಸಂಸ್ಮರಣೆ 35

ಪಂಕೇರುಹೇಕ್ಷಣ ವರಾಹ ವೆಂಕಟ ಪತಿಯ

ವೇಂಕಟಗಿರಿಯಲ್ಲಿ ಭಕ್ತಿಯಿಂ ಪುನಃ

ತಾ ಕಂಡು ಆನಂದಪುಲಕಾಶ್ರು ಸುರಿಸಿ

ಶಂಕೆಯಿಲ್ಲದೆ ಧನ್ಯ ಮನದಿ ತಿರುಗಿದರು 36

ತಿರುಗಿ ಚೀಕಲಪುರಿ ಬಂದು ಹೆತ್ತವರ

ಚರಣ ಪದ್ಮಗಳಲ್ಲಿ ನಮಿಸಿ ಅಲ್ಲಿ

ನರಹರಿ ಶ್ರೀ ಶ್ರೀನಿವಾಸನ್ನ ಸೇವಿಸುತ

ಪರಿತೋಷಿಸಿದರು ಗಾರ್ಹ ಧರ್ಮದಲಿ 37

ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ

ರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯ

ವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿ

ನಿಜದಿ ಶರಣು ಶರಣು ಶರಣಾದೇ ಸತತ 38

-ಇತಿಃ ಪ್ರಥಮಾಧ್ಯಾಯಃ-

ದ್ವಿತೀಯಾಧ್ಯಾಯ

ಶರಣು ಶರಣು ಶರಣು ವಿಜಯದಾಸಾರ್ಯರೆ

ಶರಣಾದೆ ತವ ವಾರಿಜಾಂಘ್ರಿಯುಗ್ಮದಲಿ

ಸೂರಿ ಸುರ ಜನ ಗಂಗಾಧರ ವಾಯು ವಿಧಿ ಎನುತ

ಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪ

ತಿರುಪತಿ ಘಟಿಕಾದ್ರಿ ಕಾಶಿ ಮೊದಲಾದ

ಕ್ಷೇತ್ರಾಟನೆ ಮಾಡಿ ಬಂದ ಪುತ್ರನಿಗೆ

ಭಾರಿಗುಣ ಸಾಧ್ವಿಯ ಮದುವೆ ಮಾಡಿಸಿದರು

ವಿಪ್ರರ ಮುಂದೆ ಶುಭ ಮುಹೂರ್ತದಲಿ ತಂದೆ 1

ಗುಣರೂಪವಂತಳು ವಧು ಅರಳಿಯಮ್ಮ

ಘನಮಹಾ ಪತಿವ್ರತಾ ಶಿರೋಮಣಿಯು ಈಕೆ

ತನ್ನ ಪತಿಸೇವೆಯ ಪೂರ್ಣ ಭಕ್ತಿಯಲಿ

ಅನವರತ ಮಾಡುವ ಸೌಭಾಗ್ಯವಂತೆ 2

ಪುತ್ರೋತ್ಸವಾದಿ ಶುಭ ಸಂಭ್ರಮಗಳು ಆದುವು

ನಿತ್ಯ ಹರಿತುಳಸೀಗೆ ಪೂಜಾ ವೈಭವವು

ತ್ರಾತಹರಿ ಸಾನ್ನಿಧ್ಯ ಅನುಭವಕೆ ಬರುತ್ತಿತ್ತು

ಶ್ರೀದಹರಿವಿಠ್ಠಲನು ತಾನೇವೆ ಒಲಿದ 3

ಧನಸಂಪಾದನೆಗಾಗಿ ಅನ್ಯರನು ಕಾಡದೆ

ಅನಪೇಕ್ಷ ಮನದಿಂದ ಹರಿಕೊಟ್ಟದ್ದಲ್ಲೇ

ದಿನಗಳ ಕಳೆದರು ಹೀಗೆ ಇರುವಾಗ

ಫಣಿಪಗಿರಿವೇಂಕಟನು ಮನದಲ್ಲಿ ನಲಿದ 4

ನರಹರಿಗೆ ಸನ್ನಮಿಸಿ ಅಪ್ಪಣೆ ಪಡೆದು

ಹೊರಟರು ವೇಂಕಟನಾಥನ್ನ ನೆನೆದು

ಸೇರಿದರು ಶೇಷಗಿರಿ ನಮಿಸಿ ಭಕ್ತಿಯಲಿ

ಏರಿದರು ಎರಗಿದರು ನಾರಸಿಂಹನಿಗೆ 5

ನರಸಿಂಹನಿಗೆ ಗುಡಿ ಗಾಳಿಗೋಪುರದಲ್ಲಿ

ಕರೆವರು ಬಾಷಿಂಗನರಸಿಂಹನೆಂದು

ಹರಿದಾಸರಿಗೊಲಿವ ಕಾರುಣ್ಯಮೂರ್ತಿಯು

ಕರುಣಿಸಿದ ಜಗನ್ನಾಥದಾಸರಿಗೆ ಪೀಠ 6

ದಾಸಪ್ಪ ವಿಜಯದಾಸರು ಆದ ತರುವಾಯ

ಈಶಾನುಗ್ರಹವ ಬ್ಯಾಗವಟ್ಟಿಯವರ್ಗೆ

ಶಿಷ್ಯರದ್ವಾರಾ ಒದಗಿ ಜಗನ್ನಾಥ

ದಾಸರಾಗಿ ಮಾಡಿಹರು ಪರಮದಯದಿಂದ 7

ನರಸಿಂಹನಪಾದ ಭಜಿಸಿ ಅಲ್ಲಿಂದ

ಗಿರಿ ಅರೋಹಣವನ್ನ ಮುಂದುವರಿಸಿ

ಶ್ರೀ ಶ್ರೀನಿವಾಸನ ಭೇಟಿ ಒದಗಿಸುವಂತೆ

ವರ ಅಂಜನಾಸೂನು ಹನುಮಗೆರಗಿದರು 8

ಮಹಾತ್ಮ್ಯೆ ಶ್ರೀ ನಿಧಿ ಶ್ರೀ ಶ್ರೀನಿವಾಸನ್ನ

ಮಹಾದ್ವಾರ ಗೋಪುರದಲ್ಲಿ ಸಂಸ್ಮರಿಸಿ

ಮಹಾದ್ವಾರದಲಿ ಕರಮುಗಿದು ಉತ್ತರದಿ

ಇಹ ಸ್ವಾಮಿತೀರ್ಥದಲಿ ಸ್ನಾನ ಮಾಡಿದರು 9

ಭೂರ್ಭುವಃ ಸ್ವಃಪತಿ ಭೂಧರ ವರಾಹನ್ನ

ಉದ್ಭಕ್ತಿ ಪೂರ್ವಕದಿ ವಂದಿಸಿ ಸರಸ್ಯ

ಇಭರಾಜವರದನ್ನ ಸ್ಮರಿಸುತ್ತ ಸುತ್ತಿ

ಶುಭಪ್ರದಪ್ರದಕ್ಷಿಣೆ ಮಾಡಿದರು ಮುದದಿ 10

ಪ್ರದಕ್ಷಿಣೆಗತಿಯಲ್ಲಿ ಸಾಕ್ಷಿಅಶ್ವತ್ಥನ್ನ

ಭೂಧರನ್ನ ನೋಡುತ್ತ ನಿಂತ ಹನುಮನ್ನ

ವಂದಿಸಿ ಮಹಾದ್ವಾರ ಸೇರಿ ಕೈಮುಗಿದು

ಇಂದಿರೇಶನ ಆಲಯದೊಳು ಹೋದರು 11

ಬಲಿಪೀಠ ಧ್ವಜಸ್ತಂಭ ತತ್ರಸ್ಥ ಹರಿಯನೆನೆದು

ಬೆಳ್ಳಿ ಬಾಗಿಲದಾಟಿ ಗರುಡಗೆ ನಮಿಸಿ

ಒಳಹೋಗೆ ಅಪ್ಪಣೆ ಜಯವಿಜಯರ ಕೇಳಿ

ಬಲಗಾಲ ಮುಂದಿಟ್ಟು ಹೋದರು ಒಳಗೆ 12

ಬಂಗಾರ ಬಾಗಿಲ ದಾಟಲಾಕ್ಷಣವೇ

ಕಂಗೊಳಿಸುವಂತ ಪ್ರಾಜ್ವಲ್ಯ ಕಿರೀಟ

ಚಂಚಲಿಸುವ ತಟಿನ್ನಿಭಕರ್ಣಕುಂಡಲವಿಟ್ಟ

ಗಂಗಾಜನಕ ವೆಂಕಟೇಶನ್ನ ನೋಡಿದರು 13

ಆನಂದಜ್ಞಾನಮಯ ಪಾದಪಂಕಜತತ್ರ

ಸುನೂಪುರ ಉಡಿ ವಡ್ಯಾಣ ಕೌಶೇಯ

ಮಿನುಗುವಾಂಬರ ಸಾಲಿಗ್ರಾಮದ ಹಾರ

ಘನ ಮಹಾ ಹಾರಗಳು ಸರಿಗೆ ವನಮಾಲೆ 14

ಶ್ರೀವತ್ಸ ಕೌಸ್ತುಭಮಣಿ ವೈಜಯಂತೀ

ದಿವ್ಯ ಪ್ರಜ್ವಲಿಸುವ ಪದಕಂಗಳು

ಕಿವಿಯಲ್ಲಿ ಮಿಂಚಿನಂದದಿ ಪೊಳೆವ ಕುಂಡಲ

ಸರ್ವಾಭರಣಗಳ ವರ್ಣಿಸಲು ಅಳವೇ 15

ಅಕಳಂಕ ಪೂರ್ಣೇಂದು ಮುಖಮುಗುಳುನಗೆಯು

ಕಂಗಳು ಕಾರುಣ್ಯ ಸುರಿಸುವನೋಟ

ಕಾಕು ಇಲ್ಲದ ನೀಟಾದ ಫಣೆ ತಿಲಕವು

ಚೊಕ್ಕ ಚಿನ್ನದಿ ನವರತ್ನ ಜ್ವಲಿಪ ಕಿರೀಟ 16

ಬ್ರಹ್ಮಪೂಜಿತಶ್ರೀ ಶ್ರೀನಿವಾಸನ್ನ

ಮಹಾನಂದದಿ ನೋಡಿ ಸನ್ನಮಿಸಿ ಮುದದಿ

ಬಹಿರದಿ ಬಂದು ಮತ್ತೊಮ್ಮೆ ಪ್ರದಕ್ಷಿಣೆ ಮಾಡಿ

ಮಹಾಪ್ರಾಕಾರದಲಿ ಕೊಂಡರು ಪ್ರಸಾದ (incomplete)

***


No comments:

Post a Comment