ನಿನ್ನನೆ ನಂಬಿದೆ ನೀರಜನಯನ
ಎನ್ನ ಪಾಲಿಸೊ ಇಂದಿರಾರಮಣ ||
ಗೌತಮ ಮುನಿಯ ಶಾಪದಲಿ ಅಹಲ್ಯೆಯು
ಪಥದೊಳು ಶಿಲೆಯಾಗಿ ಮಲಗಿರಲು
ಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗೆ
ಅತಿಶಯದಿ ಭಕುತರನು ಕಾಯಿದನೆಂಬೋದು ಕೇಳಿ ||
ಬಲವಂತ ಉತ್ತಾನಪಾದರಾಯನಣುಗನ
ಮಲತಾಯಿ ನೂಕಲಡವಿಯೊಳಗೆ
ಜಲಜಾಕ್ಷ ನಿನ್ನನು ಕುರಿತು ತಪವಿ-
ರಲಾಗೆ ನೀನವಗೆ ಧ್ರುವಪಟ್ಟ ಕಟ್ಟಿದ್ದು ಕೇಳಿ ||
ಸುರನರಲೋಕದಿ ಪುಣ್ಯದ ಜನರನ್ನು
ಪೊರೆಯಬೇಕೆಂದು ವೈಕುಂಠದಿಂದ
ಸಿರಿಸಹಿತದಿ ಬಂದು ಶೇಷಾಚಲದಿ ನಿಂದು
ಕರುಣಿ ಶ್ರೀಪುರಂದರವಿಠಲನೆಂಬುದ ಕೇಳಿ ||
***
ಎನ್ನ ಪಾಲಿಸೊ ಇಂದಿರಾರಮಣ ||
ಗೌತಮ ಮುನಿಯ ಶಾಪದಲಿ ಅಹಲ್ಯೆಯು
ಪಥದೊಳು ಶಿಲೆಯಾಗಿ ಮಲಗಿರಲು
ಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗೆ
ಅತಿಶಯದಿ ಭಕುತರನು ಕಾಯಿದನೆಂಬೋದು ಕೇಳಿ ||
ಬಲವಂತ ಉತ್ತಾನಪಾದರಾಯನಣುಗನ
ಮಲತಾಯಿ ನೂಕಲಡವಿಯೊಳಗೆ
ಜಲಜಾಕ್ಷ ನಿನ್ನನು ಕುರಿತು ತಪವಿ-
ರಲಾಗೆ ನೀನವಗೆ ಧ್ರುವಪಟ್ಟ ಕಟ್ಟಿದ್ದು ಕೇಳಿ ||
ಸುರನರಲೋಕದಿ ಪುಣ್ಯದ ಜನರನ್ನು
ಪೊರೆಯಬೇಕೆಂದು ವೈಕುಂಠದಿಂದ
ಸಿರಿಸಹಿತದಿ ಬಂದು ಶೇಷಾಚಲದಿ ನಿಂದು
ಕರುಣಿ ಶ್ರೀಪುರಂದರವಿಠಲನೆಂಬುದ ಕೇಳಿ ||
***
ರಾಗ ಆನಂದಭೈರವಿ. ಏಕ ತಾಳ (raga tala may differ in audio)
pallavi
ninnane nambide nIrajanayana enna pAliso indirA ramaNa
caraNam 1
gautama muniya shApadali ahalyeyu pathadoLu shileyAgi malagiralu patita
pAvana ninna pAda sOke satiyAge atishayadi bhakutaranu kAyidanembodu kELi
caraNam 2
balavanta uttAnapAdarAyaNugana malatAyi nUkalaDaviyoLage
jalajAkSa ninnanu kuritu tapaviralAge nInavage dhruvapaTTa kaTTIddu kELi
caraNam 3
sura naralOkadi puNyada janarannu poreya bEkendu vaikuNThadinda
sirisahitadi bandu shESAcaladi nindu karuNi shrI purandara viTTalanembuda kELi
***
No comments:
Post a Comment